ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಿಡ್ಡೋಡಿ: ನಾರಾಯಣಗುರು ಅಮೃತಶಿಲಾ ಮೂರ್ತಿ ಪ್ರತಿಷ್ಟೆ, ಗುರು ಕುಟೀರ ಉದ್ಘಾಟನೆ

ಮುಲ್ಕಿ:ಕಿನ್ನಿಗೋಳಿ ಸಮೀಪದ ನಿಡ್ಡೋಡಿ ಶ್ರೀ ನಾರಾಯಣಗುರು ಪ್ರಸಾದಿತ ಸಂಘದಲ್ಲಿ ನಾರಾಯಣಗುರುಗಳ ಅಮೃತ ಶಿಲಾ ಮೂರ್ತಿಯ ಪ್ರತಿಷ್ಟೆ, ಪ್ರತಿಷ್ಟಾ ಕಲಶೋತ್ಸವ, ಗುರು ಕುಟೀರದ ಉದ್ಘಾಟನೆ ಹಾಗೂ ಶ್ರೀ ನಾರಾಯಣ ಗುರುಗಳ ಸಭಾಭವನದ 14 ನೇ ವಾರ್ಷಿಕೋತ್ಸವ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಶಿರ್ತಾಡಿ ಸೋಮನಾಥ ಶಾಂತಿ, ದೇವುದಾಸ ತಂತ್ರಿ ಮುಂಬೈ ಇವರ ನೇತೃತ್ವದಲ್ಲಿ ನಡೆಯಿತು.

ಗುರುದೇವರ ಶಿಲಾಮೂರ್ತಿಯನ್ನು ನಿಡ್ಡೋಡಿ ನರಸಿಂಹ ಭಜನಾ ಮಂದಿರದ ಬಳಿಯಿಂದ ವೈಭವದ ಮೆರವಣಿಗೆಯಲ್ಲಿ ತರಲಾಯಿತು. ಎಂ.ಬಿ. ಕರ್ಕೇರ ಮೆರವಣಿಗೆಗೆ ಚಾಲನೆ ನೀಡಿದರು.

ನೂತನ ಗುರುಕಟೀರವನ್ನು ನಿಪ್ಪಾಣಿ ಓಂ ಶಕ್ತಿ ಪೀಠದ ಶೀ ಅರುಣಾನಂದ ತೀರ್ಥ ಸ್ವಾಮೀಜಿ ಉದ್ಘಾಟಿಸಿದರು. ಈ ಸಂದರ್ಭ ನಡೆದ ಸಭಾಕಾರ‍್ಯಕ್ರದಲ್ಲಿ ಕೇರಳ ಶಿವಗಿರಿ ಮಠದ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು.

ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಅಭಯಚಂದ್ರ ಜೈನ್, ಸೋಮನಾಥ ಶಾಂತಿ, ಬಿಲ್ಲವ ಮಹಾ ಮಂಡಲದ ರಾಜಶೇಖರ ಕೋಟ್ಯಾನ್, ಮೀನುಗಾರಿಕಾ ಅಭಿವೃದ್ಧಿ ನಿಗಮದ ಗೀತಾಂಜಲಿ ಸುವರ್ಣ, ಕೇಶವ ಪೂಜಾರಿ, ನಿಡ್ಡೋಡಿ ನಾರಾಯಣ ಗುರು ಸಂಘದ ಅಧ್ಯಕ್ಷ ಎಸ್. ಎನ್. ಸಾಲ್ಯಾನ್, ಭಾಸ್ಕರ ಗೌಡ, ಜಿ.ಟಿ ಆಚಾರ‍್ಯ, ವಿ.ಸಿ. ಸುವರ್ಣ, ಈಶ್ವರ ಕಟೀಲ್, ಕ್ರಿಷನ್ ಗೋಪಾಲ್ ಜೈಮಿನಿ, ಸಂದೀಪ್ ಸಾಲ್ಯಾನ್, ಜನಾರ್ದನ ಗೌಡ, ಚಂದಯ ಸುವರ್ಣ, ವೆಂಕಪ್ಪ ಕೋಟ್ಯಾನ್, ರಾಮ ಸುವರ್ಣ, ಶ್ರೀಮತಿ ಜನನಿ ಗೋಪಾಲ್ ಮುಂತಾದವರಿದ್ದರು.

ಸುಂದರ ಪೂಜಾರಿ ಸ್ವಾಗತಿಸಿದರು. ಸುಧಾಕರ ಪೂಜಾರಿ ವಂದಿಸಿದರು. ಸಂತೋಷ್ ಕುಮಾರ್ ನಿರೂಪಿಸಿದರು. 

Edited By : PublicNext Desk
Kshetra Samachara

Kshetra Samachara

17/05/2022 07:57 am

Cinque Terre

1.48 K

Cinque Terre

0

ಸಂಬಂಧಿತ ಸುದ್ದಿ