ಮುಲ್ಕಿ: ಮುಲ್ಕಿ ಸಮೀಪದ ಒಂಬತ್ತು ಮಾಗಣೆಯ ಇತಿಹಾಸ ಪ್ರಸಿದ್ಧ ಕೊಲಕಾಡಿ ಶ್ರೀ ಕಾಳಿಕಾಂಬ ದೇವಿಯ ವರ್ಷಾವದಿ ಮಹೋತ್ಸವವು ಆನೆಗುಂದಿ ಮಹಾಸಂಸ್ಥಾನ ಮಠ ದ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ಹಾಗೂ ಅರೆಮಾದನಹಳ್ಳಿ ವಿಶ್ವಕರ್ಮ ಜಗದ್ಗುರು ಪೀಠದ ಶಿವಸುಜ್ಞಾನತೀರ್ಥ ಮಹಾಸ್ವಾಮೀಜಿ ಆಶೀರ್ವಾದದೊಂದಿಗೆ ವಿಜೃಂಭಣೆಯಿಂದ ನಡೆಯಿತು.
ವರ್ಷಾವಧಿ ಮಹೋತ್ಸವದ ಪ್ರಯುಕ್ತ ಪ್ರಾತಃಕಾಲ ವಿಶೇಷ ಪ್ರಾರ್ಥನೆ ಪವಮಾನ ಸೂಕ್ತ ಅಭಿಷೇಕ ಅಲಂಕಾರ ಪೂಜೆ, ಬೆಳಿಗ್ಗೆ 10.30ಕ್ಕೆ ಮಹಾಪೂಜೆ, ದರ್ಶನ, ಅಭಯ ಪ್ರಸಾದ ನಡೆದು ಬಲಿ ಹೊರಟು ಉತ್ಸವ, ದಿಕ್ಪಾಲ ಬಲಿ, ಲಾಲಕಿ ಪಲ್ಲಕ್ಕಿ ಉತ್ಸವ, ರಥೋತ್ಸವ, ರಥ ಕಾಣಿಕೆ ನಡೆದು ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭ ದೇವಸ್ಥಾನದ ಆಡಳಿತ ಮೊಕ್ತೇಸರ ಸುಧಾಕರ ಆಚಾರ್ಯ ಕೊಲಕಾಡಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಈ ಸುಬ್ರಾಯ ಆಚಾರ್ಯ ಕೊಲಕಾಡಿ,ವಿಶ್ವ ಕರ್ಮ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
ರಾತ್ರಿ ಬಲಿ ಹೊರಟು ಮಹಾ ರಥೋತ್ಸವ ನಡೆಯಿತು. ಸೋಮವಾರ ಸಂಪ್ರೋಕ್ಷಣೆ ಶ್ರೀ ಸತ್ಯ ದೇವತೆಗೆ ತಂಬಿಲ ಪೂಜೆ, ಶ್ರೀ ಭದ್ರಕಾಳಿ ಮಹಾಶಕ್ತಿ ಗೆ ಗದ್ದಿಗೆ ಪೂಜೆ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿದೆ.
Kshetra Samachara
20/03/2022 02:53 pm