ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಳೆಯಂಗಡಿ: ದಿ. ನಾರಾಯಣ ಸನಿಲ್ ಆದರ್ಶ ಅನುಕರಣೀಯ: ವಿನಯ್ ಕುಮಾರ್ ಸೂರಿಂಜೆ

ಮುಲ್ಕಿ:ಪ್ರಜಾಪ್ರಭುತ್ವದಲ್ಲಿ ಸಂಪೂರ್ಣ ನಂಬಿಕೆ ಇರಿಸಿಕೊಂಡು ಸಹಕಾರಿ ತತ್ವದ ಮೂಲಕ ಸಮಾಜದ ಬಡತನ ನಿವಾರಣೆಗೆ ಜೀವನ ಪರ್ಯಂತ ಹೋರಾಟನಡೆಸಿದ ನಾರಾಯಣ ಸನಿಲ್ ರವರ ಜೀವನ ತತ್ವ ಅನುಕರಣೀಯವಾಗಿದೆ ಎಂದು ಎಸ್ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ ಹೇಳಿದರು.

ಹಳೆಯಂಗಡಿಯ ಪ್ರಿಯದರ್ಶಿನಿ ಸಹಕಾರ ಸಂಘದ ಆಶ್ರಯದಲ್ಲಿ ಶುಕ್ರವಾರ ಸಹಕಾರಿ ಭೀಷ್ಮ ದಿ. ಎಚ್.ನಾರಾಯಣ ಸನಿಲ್ ರವರ 100ನೇ ಜನ್ಮ ದಿನಾಚರಣೆ ಪ್ರಯುಕ್ತ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.ಹಿರಿಯ ವಾಘ್ಮಿ ಗಣೇಶ್ ಅಮೀನ್ ಸಂಕಮಾರ್ ಪ್ರಸ್ತಾವಿಸಿ, ಗ್ರಾಮೀಣ ಬಡವರ್ಗದ ಜನರಿಗೆ ಶಿಕ್ಷಣ ನೀಡುವ ಮೂಲಕ ಆರ್ಥಿಕ ಸ್ವಾವಲಂಭನೆ ಗಳಿಸುವಂತೆ ಮಾಡಿದ ಸಹಕಾರಿ ತಜ್ಞರಾಗಿ, ನ್ಯಾಯ ಪಂಚಾಯತಿಯ ಮೂಲಕ ಗ್ರಾಮಕ್ಕೆ ಹೆಸರು ತಂದುಕೊಟ್ಟ ಮೇಧಾವಿಗಳು ಆಗಿದ್ದರು. ಅವರ ಸಂಸ್ಮರಣೆ ಹಾಗೂ ಅವರ ಹೆಸರಿನ ಪ್ರಶಸ್ತಿ ನೀಡುವ ಮೂಲಕ ಮುಂದಿನ ಪೀಳಿಗೆಗೆ ಅವರ ಜೀವನ ತತ್ವಗಳನ್ನು ಪರಿಚಯಿಸುವ ಕೆಲಸ ಮಾಡಲಾಗುವುದು ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಹಳೆಯಂಗಡಿ ಪ್ರಿಯದರ್ಶಿನಿ ಸಹಕಾರ ಸಂಘದ ಅಧ್ಯಕ್ಷ ವಸಂತ್ ಬೆರ್ನಾಡ್ ವಹಿಸಿದ್ದರು. ನಾರಾಯಣ ಸನಿಲ್ ರವರ ಸಂಭಂದಿ ವಿಜಯ ಸನಿಲ್, ಹಳೆಯಂಗಡಿ ಪ್ರಿಯದರ್ಶಿನಿ ಸಹಕಾರ ಸಂಘದ ಉಪಾಧ್ಯಕ್ಷ ಪ್ರತಿಭಾ ಕುಳಾಯಿ, ನಿರ್ದೇಶಕ ಧನಂಜಯ ಮಟ್ಟು ಮತ್ತಿತರರು ಹಾಜರಿದ್ದರು.

Edited By : PublicNext Desk
Kshetra Samachara

Kshetra Samachara

18/03/2022 11:32 am

Cinque Terre

510

Cinque Terre

0

ಸಂಬಂಧಿತ ಸುದ್ದಿ