ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಾವಂಜೆ: "ನಾರಾಯಣಗುರುಗಳ ಆದರ್ಶಗಳು ಕಾಲಕಾಲಕ್ಕೆ ಪ್ರಸ್ತುತ"

ಮುಲ್ಕಿ: 19ನೇ ಶತಮಾನದಲ್ಲಿ ನಾರಾಯಣ ಗುರುಗಳು ಹಿಂದುಳಿದ ವರ್ಗದ ಅಭಿವೃದ್ಧಿಗಾಗಿ ಕೈಗೊಂಡ ಶೈಕ್ಷಣಿಕ-ಸಾಮಾಜಿಕ ಕಾರ್ಯಗಳು ಇಂದಿನ ಯುವ ಸಮಾಜದ ಅಧ್ಯಯನಕ್ಕೆ ಬಹಳ ಪೂರಕವಾಗಿದ್ದು ಅವರ ತತ್ವ ಆದರ್ಶಗಳು ಸರ್ವಕಾಲಿಕವಾಗಿ ಪ್ರಸ್ತುತವಾಗಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಸುಬ್ರಹ್ಮಣ್ಯ ಯಡಪಡಿತ್ತಾಯರವರು ಹೇಳಿದರು.

ನಿನಾದ ಪಾವಂಜೆಯ ನಿನಾದ ರಂಗಮಂದಿರದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ, ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠ ನಿನಾದ ತುಳು ಸಂಸ್ಕೃತಿ ಅಧ್ಯಯನ ಕೇಂದ್ರ ಪಾವಂಜೆ ಸಂಯೋಜನೆಯಲ್ಲಿ ಗೋವಿಂದದಾಸ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ಕಾಟಿಪಳ್ಳದ ನಾರಾಯಣಗುರು ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಗುರು ನಡೆ ಗ್ರಾಮದೆಡೆ ಎನ್ನುವ ನಾರಾಯಣ ಗುರುಗಳ ಶಿಕ್ಷಣ ಸಂದೇಶದ ಸಮಾಜಮುಖಿ ಅಭಿಯಾನದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು

ವಿಶ್ವವಿದ್ಯಾನಿಲಯದ ಕುಲಸಚಿವರಾದ ಡಾ. ಕಿಶೋರ್ ಕುಮಾರ್ ಸಿ.ಕೆ. ಮಾತನಾಡಿದರು

ಕಾರ್ಯಕ್ರಮದಲ್ಲಿ ನಾರಾಯಣಗುರು ಸತ್ಯದರ್ಶನ ಅನುವಾದ ಕೃತಿಯನ್ನು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಸುಬ್ರಹ್ಮಣ್ಯ ಯಡಪಡಿತ್ತಾಯ ಬಿಡುಗಡೆಗೊಳಿಸಿದರು.

ಬಹುಮುಖ ಪ್ರತಿಭಾ ಸಂಪನ್ನೆ ಎನ್.ಸಿಸಿ. ಎನ್ಎಸ್ ಎಸ್, ಭರತನಾಟ್ಯ ಕಲಾ ಸಾಧಕಿ ,ಸುರತ್ಕಲ್ ಗೋವಿಂದದಾಸ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ಹಿತಾ ಉಮೇಶ್ ರವರನ್ನು ಗೌರವಿಸಲಾಯಿತು.

ಉಪನ್ಯಾಸಕ ಧರ್ಮಪಾಲ ಎಚಿಟಿ ಯವರು ನಾರಾಯಣಗುರು ಸತ್ಯದರ್ಶನದ ಬಗ್ಗೆ ಉಪನ್ಯಾಸ ನೀಡಿದರು. ಅಭ್ಯಾಗತರಾಗಿ ಪತ್ರಕರ್ತ ಯು.ಕೆ. ಕುಮಾರನಾಥ್,ಉಡುಪಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ. ಗಣನಾಥ ಶೆಟ್ಟಿ ಎಕ್ಕಾರ್, ಉದ್ಯಮಿ ಕಡಂಬೋಡಿ ಮಹಾಬಲ ಪೂಜಾರಿ,ಕುಸುಮಾ ಮಹಾಬಲ ಪೂಜಾರಿ, ಪ್ರಸಾದ್ ರೈ ಕಲ್ಲಿಮಾರ್, ಸಂತೋಷ್ ಕುಮಾರ್ ಹೆಗ್ಡೆ, ಅಧ್ಯಯನ ಪೀಠದ ನಿರ್ದೇಶಕ ಡಾ. ಗಣೇಶ್ ಅಮೀನ್ ಸಂಕಮಾರ್ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

01/03/2022 05:50 pm

Cinque Terre

1.19 K

Cinque Terre

0

ಸಂಬಂಧಿತ ಸುದ್ದಿ