ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ:ಒಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ದೀಪಾವಳಿ ಪ್ರಯುಕ್ತ ವಿಶೇಷ ಸಂಭ್ರಮದ ಗೋಪೂಜೆ

ಮುಲ್ಕಿ: ಮುಲ್ಕಿಯ ಇತಿಹಾಸ ಪ್ರಸಿದ್ಧ ಒಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ದೀಪಾವಳಿಯ ಪ್ರಯುಕ್ತ ದೇವಸ್ಥಾನದಲ್ಲಿ ವಿಶೇಷ ಗೋ ಪೂಜೆ ವಿಜೃಂಭಣೆಯಿಂದ ನಡೆಯಿತು.

ಶುಕ್ರವಾರ ಮಧ್ಯಾಹ್ನ ದೇವಸ್ಥಾನದಲ್ಲಿ ಮಹಾಪೂಜೆ ನಡೆದು ಬಳಿಕ ಗೋಪೂಜೆ ಗೆ ಚಾಲನೆ ನೀಡಲಾಯಿತು.

ಅರ್ಚಕ ವೇದಮೂರ್ತಿ ರಮಾನಾಥ ಭಟ್ ನೇತೃತ್ವದಲ್ಲಿ ಗೋವುಗಳಿಗೆ ವಿಶೇಷ ಪೂಜೆ ನಡೆಯಿತು.

ಈ ಸಂದರ್ಭ ಅವರು ಆಶೀರ್ವಚನ ನೀಡಿ ಗೋವು ದೇವರ ಸ್ಥಾನವನ್ನು ಪಡೆದಿದ್ದು ವಿಶ್ವದಲ್ಲಿ ಗೋವುಗಳಿಗೆ ವಿಶೇಷ ಸ್ಥಾನಮಾನವಿದೆ. ಗೋಪೂಜೆಯ ಮುಖಾಂತರ ಲೋಕ ಕಲ್ಯಾಣವಾಗಲಿ ಎಂದರು.

ಸುಮಾರು 150ಕ್ಕೂ ಮಿಕ್ಕಿ ದಾಖಲೆಯ ವಿವಿಧ ತಳಿಯ ಗೋವುಗಳು ಭಕ್ತರನ್ನು ಆಕರ್ಷಿಸಿದ್ದು ವಿಶೇಷ ಪೂಜೆ ಪುನಸ್ಕಾರ ನಡೆಯಿತು.

ಈ ಸಂದರ್ಭ ದೇವಳದ ಆಡಳಿತ ಮಂಡಳಿಯ ಸದಸ್ಯರು ಭಕ್ತರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

05/11/2021 02:26 pm

Cinque Terre

2.56 K

Cinque Terre

0

ಸಂಬಂಧಿತ ಸುದ್ದಿ