ಉಡುಪಿ: ಮಣಿಪಾಲದ ವಿಕ್ಟೋರಿಯಾ ಫುಟ್ ಬಾಲ್ ಅಕಾಡೆಮಿ ವತಿಯಿಂದ ಆಸರೆ ಚಾರಿಟೇಬಲ್ ಟ್ರಸ್ಟ್‌ಗೆ ವ್ಹೀಲ್ ಚೇರ್ ಹಸ್ತಾಂತರ ಇಂದು ನಡೆಯಿತು.
ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಮತ್ತು ಅರ್ಚನಾ ಟ್ರಸ್ಟ್ ಜಂಟಿಯಾಗಿ ಆಸರೆ ಟ್ರಸ್ಟ್ ನ್ನು ನಡೆಸುತ್ತಿದೆ. ಟ್ರಸ್ಟ್ ಹಲವು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಕೊಡುಗೆ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾಹೆಯ ಕರ್ನಲ್ ಉಮಾಕಾಂತ್ ಸಿಂಗ್ ಮುಖ್ಯ ಅತಿಥಿಯಾಗಿದ್ದರು. ಇದೇ ವೇಳೆ ಫುಟ್ ಬಾಲ್ ಅಕಾಡೆಮಿಯ ಸಂಸ್ಥಾಪಕರು, ಉತ್ಸಾಹಿ ತರುಣ- ತರುಣಿಯರಾದ ಕ್ಲೈವ್ ನೊಲನ್ ಮಸ್ಕರೇನಸ್ ಮತ್ತು ಮಿಲನಾ ಅವರು ಆಸರೆ ಟ್ರಸ್ಟ್ ನ ಮಕ್ಕಳಿಗೆ ಉಚಿತ ಫುಟ್ ಬಾಲ್ ತರಬೇತಿ ನೀಡುವುದಾಗಿ ಪ್ರಕಟಿಸಿದರು. ಮಾಹೆಯ ಜೈವಿಠಲ್ , ಕೆಎಂಸಿಯ ಶೈಜಾ ಉಪಸ್ಥಿತರಿದ್ದರು.
Kshetra Samachara
28/02/2021 07:15 pm