ಮುಲ್ಕಿ: ಯಕ್ಷಗಾನ ಕಲೆಯನ್ನು ಉಳಿಸುವುದರೊಂದಿಗೆ ಕಲಾವಿದರನ್ನು ಗುರುತಿಸಿ, ಗೌರವಿಸುವುದು ಶ್ರೇಷ್ಠ ಕೈಂಕರ್ಯ ಎಂದು ಕೊಡೆತ್ತೂರು ವೇದವ್ಯಾಸ ಉಡುಪ ಹೇಳಿದರು.
ಅವರು ಕಿನ್ನಿಗೋಳಿ ಸಮೀಪದ ಉಲ್ಲಂಜೆಯಲ್ಲಿ ಶ್ರೀ ಕೊರಗಜ್ಜ, ಶ್ರೀ ಮಂತ್ರದೇವತೆ, ಶ್ರೀ ಚಾಮುಂಡೇಶ್ವರಿ, ಶ್ರೀ ಗುಳಿಗ ಸನ್ನಿಧಿಯಲ್ಲಿ ಕಟೀಲು ಮೇಳದವರ ಏಳನೇ ವರ್ಷದ ಯಕ್ಷಗಾನ ಬಯಲಾಟದ ಸಂದರ್ಭ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಂಗ ವೇದಿಕೆಯಲ್ಲಿ ಕ್ಷೇತ್ರದ ಮುಖ್ಯಸ್ಥ, ಧರ್ಮದರ್ಶಿ ಹರೀಶ್ ಪೂಜಾರಿ, ಶ್ರೀ ಅರಸು ಕುಂಜರಾಯ ದೈವಸ್ಥಾನದ ಆಡಳಿತ ಮೊಕ್ತೇಸರ ದೇವಿ ಪ್ರಸಾದ್ ಶೆಟ್ಟಿ, ಸತೀಶ್ ಪೂಜಾರಿ ಮಂಚಕಲ್ಲು, ಶಿರ್ವ ಮುಲ್ಕಿ ವಲಯ ಪತ್ರಕರ್ತರ ಸಂಘದ ಅಧ್ಯಕ್ಷ ನಿಶಾಂತ್ ಕಿಲೆಂಜೂರು, ವಸಂತ ಪೂಜಾರಿ, ಯಶೋಧರ ಶೆಟ್ಟಿ, ಸುಮಿತ್ ಕುಮಾರ್, ಪ್ರವೀಣ್ ಗಣೇಶ್, ನಿತಿನ್ ಉಪಸ್ಥಿತರಿದ್ದರು.
ಪ್ರಕಾಶ್ ಕಿನ್ನಿಗೊಳಿ ಸ್ವಾಗತಿಸಿ, ವಂದಿಸಿದರು.
ಈ ಸಂದರ್ಭದಲ್ಲಿ ಪಾಕತಜ್ಞ ಎಕ್ಕಾರು ಶಂಕರ್ ಭಟ್, ಯಕ್ಷಗಾನ ಕಲಾವಿದ ಸುಣ್ಣಂಬಳ ವಿಶ್ವೇಶ್ವರ ಭಟ್ ಅವರನ್ನು ಗೌರವಿಸಲಾಯಿತು.
Kshetra Samachara
19/12/2020 08:24 am