ಸುಬ್ರಹ್ಮಣ್ಯ: ಕಡಬ ತಾಲೂಕಿನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ರಭಾರ ಸಹಾಯಕ ಕಾರ್ಯನಿರ್ವಹಣಾಧಿಕಾರಿಯಾಗಿ ಮೂರುವರೆ ವರ್ಷ ಕೆಲಸ ನಿರ್ವಹಿಸಿದ್ದ ಚಂದ್ರಶೇಖರ ಪೇರಾಲು ಅವರನ್ನು ಗುರುವಾರ ಗೌರವಿಸಿ ಬೀಳ್ಕೊಡಲಾಯಿತು.
ಈ ವೇಳೆ ಮಾತನಾಡಿದ ಚಂದ್ರಶೇಖರ್, ದೇಗುಲದಲ್ಲಿ ಕೆಲಸ ನಿರ್ವಹಿಸಿರುವುದು ನನ್ನ ಪಾಲಿನ ಸುಯೋಗ. ನೂತನ ಬ್ರಹ್ಮರಥ ಬರುವಾಗ ಮತ್ತು ರಥೋತ್ಸವ ಸಮಯದಲ್ಲಿ ಕೆಲಸ ನಿರ್ವಹಿಸಿರುವುದು ತ್ರಾಸವೆನಿಸಿದರೂ ತೃಪ್ತಿಯಿದೆ ಎಂದರು.
ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಂ.ಎಚ್., ಸಹಾಯಕ ಕಾರ್ಯನಿರ್ವಹಣಾಧಿಕಾರಿ ಪುಷ್ಪಲತಾ, ಅಧೀಕ್ಷಕ ಬಾಲಸುಬ್ರಹ್ಮಣ್ಯ ಭಟ್, ಇಂಜಿನಿಯರ್ ಉದಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
13/11/2020 11:17 am