ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಬೈಕ್ ವ್ಹೀಲಿಂಗ್ ನಡೆಸಿದ್ದ ಯುವಕರು ಬಂಧನ: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ವಿಡಿಯೋ

ಮಂಗಳೂರು ನಗರದ ಹಲವೆಡೆ ಬೈಕ್ ವ್ಹೀಲಿಂಗ್ ನಡೆಸಿದ್ದ ಎಂಟು ಮಂದಿ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ‌. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ವಿಡಿಯೋಗಳ ಹಿನ್ನೆಲೆಯಲ್ಲಿ ಮಂಗಳೂರು ಡಿಸಿಪಿ ದಿನೇಶ್ ಕುಮಾರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದ್ದಾರೆ.

ಒಟ್ಟು ಐದು ಪ್ರಕರಣ ದಾಖಲಿಸಿ ಎಂಟು ಮಂದಿಯನ್ನು ಬಂಧಿಸಲಾಗಿದೆ. ಬಂಧಿತರನ್ನು ಇಲ್ಯಾಸ್, ಸುಹೈಲ್, ಅಬೂಬಕ್ಕರ್ ಸಿದ್ದಿಕ್, ಸಫ್ವಾನ್, ಶರೀಫ್, ತೌಸಿಫ್, ಅನೀಝ್, ಕಿಶನ್ ಶೆಟ್ಟಿ ಎಂದು ಗುರುತಿಸಲಾಗಿದೆ. ತೊಕ್ಕೊಟ್ಟು ಫ್ಲೈ ಓವರ್, ಉಳ್ಳಾಲ, ಅಡ್ಯಾರ್, ವಾಮಂಜೂರು ಭಾಗದಲ್ಲಿ ವೀಲಿಂಗ್ ಮಾಡಲು ಬಳಸಿದ ಐದು ಬೈಕ್ ಗಳನ್ನ ವಶಕ್ಕೆ ಪಡೆಯಲಾಗಿದೆ. ರಸ್ತೆಯಲ್ಲಿ ವ್ಹೀಲಿಂಗ್ ಮತ್ತು ಅಪಾಯಕಾರಿ ಸ್ಟಂಟ್ ಮಾಡಿದ್ದ ಯುವಕರು ತಮ್ಮ ವ್ಹೀಲಿಂಗ್ ವಿಡಿಯೋಗಳನ್ನ ತಾವೇ ಸೋಶಿಯಲ್ ಮೀಡಿಯಾಗಳಲ್ಲಿ ಅಪ್ಲೋಡ್ ಮಾಡಿದ್ರು.

Edited By :
PublicNext

PublicNext

12/03/2022 02:27 pm

Cinque Terre

42.73 K

Cinque Terre

4

ಸಂಬಂಧಿತ ಸುದ್ದಿ