ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಪಾವಂಜೆ ಚೇಳಾಯರು ಕ್ರಾಸ್ ಕಾರಿಗೆ ತಡೆರಹಿತ ಬಸ್ಸು ಡಿಕ್ಕಿಯಾಗಿ ಕಾರಿನ ಚಾಲಕ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗಾಯಾಳುವನ್ನು ಸಂಜೀವ ಪೂಜಾರಿ ಎಂದು ಗುರುತಿಸಲಾಗಿದೆ.
ಗಾಯಾಳು ಸಂಜೀವ ಪೂಜಾರಿ ರವರು ತನ್ನ ಕಾರಿನಲ್ಲಿ ಪಾವಂಜೆ ಜಂಕ್ಷನ್ ಕಡೆಯಿಂದ ಚೇಳಾಯರು ಜಾರಂದಾಯ ಧೂಮಾವತಿ ದೈವಸ್ಥಾನದ ಕ್ರಾಸ್ ನ ತೆರೆದ ಡಿವೈಡರ್ ನಲ್ಲಿ ಯೂ ಟರ್ನ್ ಮಾಡುವ ಸಲುವಾಗಿ ತನ್ನ ಕಾರನ್ನು ನಿಧಾನಿಸುತ್ತಿದ್ದ ಸಂದರ್ಭ ಕಾರಿನ ಹಿಂದಿನಿಂದ ಉಡುಪಿ ಕಡೆ ಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ತಡೆರಹಿತ ವಿಶಾಲ್ ಟ್ರಾವೆಲ್ಸ್ ಬಸ್ಸು ಡಿಕ್ಕಿ ಹೊಡೆದಿದೆ.
ಬಸ್ಸಿನ ಚಾಲಕ ಜೇಮ್ಸ್ ಹ್ಯಾಮಿಲ್ತನ್ ನಿರ್ಲಕ್ಷತನದ ಚಾಲನೆಯಿಂದ ಚಲಾಯಿಸಿಕೊಂಡು ಬಂದು ಕಾರಿನ ಹಿಂಭಾಗಕ್ಕೆ ಡಿಕ್ಕಿಹೊಡೆದು ಮುಂದಕ್ಕೆ ತಳ್ಳಿಕೊಂಡು ಹೋಗಿದ್ದು ಡಿವೈಡರಿನ ಮಧ್ಯಭಾಗದಲ್ಲಿ ಕಾರು ಪಾವಂಜೆ ಜಂಕ್ಷನ್ ಕಡೆಗೆ ಮುಖಮಾಡಿ ನಿಂತಿದೆ.
ಅಪಘಾತದಿಂದ ಸಂಜೀವ ಪೂಜಾರಿಯವರ ತಲೆಯ ಮಧ್ಯಭಾಗದಲ್ಲಿ ಚರ್ಮ ಹರಿದ ರೀತಿಯ ರಕ್ತಗಾಯವಾಗಿ ಚಿಕಿತ್ಸೆಯ ಬಗ್ಗೆ ಮುಕ್ಕ ಶ್ರೀನಿವಾಸ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ.
ಮಗ ಸುಧಾಕರ ಗುಜರನ್ ಮಂಗಳೂರು ಉತ್ತರ ಸಂಚಾರಿ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
Kshetra Samachara
23/11/2021 08:28 pm