ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕೊಟ್ಪಾ ಕಾಯ್ದೆ ಕಾರ್ಯಾಚರಣೆ: 28 ಪ್ರಕರಣ ದಾಖಲು; 4,950 ರೂ‌‌. ದಂಡ

ಮಂಗಳೂರು: ನಗರದ ಪಣಂಬೂರು ಹಾಗೂ ಬೈಕಂಪಾಡಿ ಪ್ರದೇಶದಲ್ಲಿ ಕೊಟ್ಪಾ ಕಾಯ್ದೆಯ ಅನ್ವಯ ನಿನ್ನೆ ಹಾಗೂ ಇಂದು ಎರಡು ದಿನಗಳ ಕಾಲ ಜಿಲ್ಲಾ/ತಾಲೂಕು ತನಿಖಾದಳ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿ ಕಾರ್ಯಚರಣೆ ನಡೆಸಿ ಒಟ್ಟು 28 ಪ್ರಕರಣಗಳನ್ನು ದಾಖಲಿಸಿ 4,950 ರೂ‌‌. ದಂಡ ವಿಧಿಸಿದೆ‌.

ತಂಬಾಕು ಹಾಗೂ ಪಾನ್ ಮಸಾಲ ಉತ್ಪನ್ನಗಳನ್ನು ಜಗಿದು ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದರಿಂದ ಕೊರೊನಾ ಹಾಗೂ ಇತರೆ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ/ತಾಲೂಕು ತನಿಖಾದಳ ಹಾಗೂ ಪೊಲೀಸ್ ಇಲಾಖಾ ತಂಡ ಕೊಟ್ಪಾ-2003 ಕಾಯ್ದೆ ಉಲ್ಲಂಘನೆಯ ವಿರುದ್ಧ ಕಾರ್ಯಚರಣೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಜ.29 ರಂದು ಸೆಕ್ಷನ್ 4, 6 ಎ ಹಾಗೂ 6 ಬಿ ಪ್ರಕಾರ 15 ಪ್ರಕರಣ ದಾಖಲಿಸಿ ಸುಮಾರು 2,350 ರೂ. ದಂಡ ವಿಧಿಸಲಾಯಿತು. ಜ.30 ರಂದು ಸೆಕ್ಷನ್ 4, 6ಎ ಹಾಗೂ 6ಬಿ ಪ್ರಕಾರ 13 ಪ್ರಕರಣ ದಾಖಲಿಸಿ ಸುಮಾರು 2,600 ರೂ. ದಂಡ ವಿಧಿಸಲಾಯಿತು‌. ಅದೇ ರೀತಿ ಈ ಕಾಯ್ದೆ ಕುರಿತಂತೆ ಅಂಗಡಿ ಹಾಗೂ ಹೋಟೇಲ್ ಮಾಲಿಕರಿಗೆ ಮಾಹಿತಿ ನೀಡಲಾಯಿತು.

ಈ ಸಂದರ್ಭ ತಾಲೂಕು ಆರೋಗ್ಯ ಅಧಿಕಾರಿ ಡಾ.ಸುಜಯ್ ಭಂಡಾರಿ, ಜಿಲ್ಲಾ ಸಲಹೆಗಾರ ಡಾ. ಹನುಮಂತರಾಯಪ್ಪ, ಆಪ್ತಸಮಾಲೋಚಕ ವಿಜಯ್ ನಾಯ್ಕ್, ಕಚೇರಿ ಸಹಾಯಕಿ ವಿದ್ಯಾ ಕುಮಾರಿ ಹಾಗೂ ಪಣಂಬೂರು ಪೊಲೀಸ್ ಠಾಣಾ ಸಿಬ್ಬಂದಿಯಾದ ಶ್ರೀರಾಮ ಪ್ರಭು ಮತ್ತು ಬಸವರಾಜ್ ಉಪಸ್ಥಿತರಿದ್ದರು.

Edited By : Nagaraj Tulugeri
Kshetra Samachara

Kshetra Samachara

30/01/2021 10:07 pm

Cinque Terre

12.15 K

Cinque Terre

0

ಸಂಬಂಧಿತ ಸುದ್ದಿ