ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇವಾಲಯಗಳಲ್ಲಿ ಪಿಕ್‌ಪಾಕೆಟ್ ಮಾಡುತ್ತಿದ್ದ ತಂಡ ಬಂಧನ

ಮಂಗಳೂರು: ಕರ್ನಾಟಕ ಮತ್ತು ಗೋವಾದ ವಿವಿಧ ದೇವಾಲಯಗಳಲ್ಲಿ ನಡೆದಿದ್ದ ಪಿಕ್ ಪಾಕೆಟಿಂಗ್ ಪ್ರಕರಣಗಳಿಗೆ ಸಂಬಂಧಿಸಿದಂತೆ ನಾಲ್ಕು ಮಹಿಳೆಯರು ಸೇರಿದಂತೆ ಆರು ಜನರನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಯಮುನಪ್ಪ ಮುತ್ತಪ್ಪ ಚಲವಾಡಿ (55), ಪ್ರಕಾಶ್ ಚೆನ್ನಪ್ಪ (26), ಶೋಭಾ ಮುತ್ತಾಗರ್ (40), ಕುಮಾರಮ್ಮ ಮಾರುತಿ ಮುತ್ತಾಗರ್ (45), ಶಾಂತಮ್ಮ ಮುತ್ತಾಗರ್ (55), ಚಂದ್ರಶೇಖರ್ ಶಿವರೆದಪ್ಪ (49) ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಂಧಿತರಿಂದ ಏಳು ಮೊಬೈಲ್‌ಗಳು, 21,540 ರೂ. ನಗದು, ಮತ್ತು ಕಳ್ಳತನಕ್ಕೆ ಬಳಸಿದ್ಧ ವಾಹನವನ್ನು ವಶಕ್ಕೆ ತೆಗೆದುಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಜನವರಿ 12 ರಂದು ಯಶೋಧಾ ಗೌಡರ ಎಂಬವರು ಕಟೀಲು ದುರ್ಗಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ವೇಳೆ ಯಾರೀ ಪರ್ಸ್ ಕದ್ದಿರುವುದಾಗಿ ಬಜಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಪೊಲೀಸರು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವೀಯಾದ್ದಾರೆ.

ಬಂಧಿತರು ಗೋವಾ, ಗೋಕರ್ಣ, ಮುರುಡೇಶ್ವರ, ಕೊಲೂರು, ಶೃಂಗೇರಿ, ಕಟೀಲು ಮತ್ತು ಇತರ ಪ್ರಮುಖ ದೇವಾಲಯಗಳಲ್ಲಿ ಕಳ್ಳತನ ನಡೆಸುತ್ತಿದ್ದರೆಂದು ವಿಚಾರಣೆಯ ವೇಳೆ ಬಾಯಿಬಿಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

16/01/2021 06:24 pm

Cinque Terre

12.07 K

Cinque Terre

1

ಸಂಬಂಧಿತ ಸುದ್ದಿ