ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್: ಚಿತ್ರಾಪುರದಲ್ಲಿ ಬಾಲಕ ಸಮುದ್ರದಲ್ಲಿ ಮುಳುಗಿ ಸಾವು; ಮೂವರು ಪಾರು

ಮುಲ್ಕಿ: ಸುರತ್ಕಲ್ ಸಮೀಪದ ಚಿತ್ರಾಪುರ ಬಳಿ ಸಮುದ್ರಕ್ಕೆ ಈಜಾಡಲು ತೆರಳಿದ್ದ ಬಾಲಕನೊಬ್ಬ ನೀರು ಪಾಲಾಗಿದ್ದಾನೆ.

ಉತ್ತರ ಕರ್ನಾಟಕದ ಬಾಗಲಕೋಟೆ ಮೂಲದ ಆಕಾಶ್ (13) ಕಡಲ ಪಾಲಾದ ಬಾಲಕ. ಆಕಾಶ್ ಶನಿವಾರ ಸಂಜೆ ಸುಮಾರು 4ರ ವೇಳೆಗೆ ಸ್ನೇಹಿತರ ಜೊತೆ ಸಮುದ್ರಕ್ಕೆ ಇಳಿದಿದ್ದು, ಏಕಾಏಕಿ ಮುಳುಗಿ ನಾಪತ್ತೆಯಾಗಿದ್ದಾನೆ. ಸ್ಥಳೀಯರು ಬಾಲಕನ ಪತ್ತೆಗೆ ಸತತ ಹುಡುಕಾಟ ನಡೆಸಿದ್ದು, ಸಂಜೆ 6 ಗಂಟೆಯ ವೇಳೆಗೆ ಹೊಸಬೆಟ್ಟು ಬಳಿ ಮೃತದೇಹ ಲಭಿಸಿದೆ. ಈತನೊಂದಿಗೆ ಈಜಾಡುತ್ತಿದ್ದ ಮೂವರು ಅಪಾಯವಿಲ್ಲದೆ ಪಾರಾಗಿದ್ದಾರೆ. ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Vijay Kumar
Kshetra Samachara

Kshetra Samachara

02/01/2021 08:12 pm

Cinque Terre

10.17 K

Cinque Terre

0

ಸಂಬಂಧಿತ ಸುದ್ದಿ