ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಪಣಂಬೂರು ಬೀಚ್‌ನಲ್ಲಿ ಮಾದಕದ್ರವ್ಯ ಸೇವನೆ - 8 ಮಂದಿ ಯುವಕರು ವಶಕ್ಕೆ

ಮಂಗಳೂರು: ನಗರದ ಪಣಂಬೂರು ಬೀಚ್‌ನಲ್ಲಿ ಮಾದಕದ್ರವ್ಯ ಸೇವನೆ ಮಾಡಿ ನಶೆಯಲ್ಲಿದ್ದ ಎಂಟು ಮಂದಿ ಯುವಕರನ್ನು ಪಣಂಬೂರು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಮೊಹಮ್ಮದ್ ಅಝ್ಮಲ್ (20), ಆಸೀಫ್ ಕೆ.ಪಿ.(20), ಅಭಿಜಿತ್ ಟಿ.ಪಿ. (21), ಮಹಮ್ಮದ್ ನಿಹಾಲ್ ಕೆ. ಎನ್.(21), ಶಾಹಲ್ ಮೊಹಮ್ಮದ್ ಕೆ.ಟಿ. (21), ಅಫ್ಝಲ್ ಎಮ್.(20), ರಿಥುಲ್ (22) ಹಾಗೂ ಆದಿತ್ಯ(22) ಮಾದಕದ್ರವ್ಯ ಸೇವಿಸಿರುವ ಆರೋಪಿಗಳು.

ಡಿಸೆಂಬರ್ 12ರಂದು ಸಂಜೆ 4ಗಂಟೆ ವೇಳೆಗೆ ಪಣಂಬೂರು ಪೊಲೀಸರು ಬೀಚ್‌ನಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದರು. ಈ ವೇಳೆ ಪಣಂಬೂರು ಬೀಚಿನ ಉತ್ತರ ಬದಿಯ ಸಮುದ್ರ ಕಿನಾರೆ ಬಳಿ ಮಾದಕದ್ರವ್ಯ ಸೇವನೆ ಮಾಡಿ ನಶೆಯಲ್ಲಿ ಇದ್ದಂತೆ ಕಂಡು ಬಂದ ಎಂಟು ಮಂದಿಯನ್ನು ವಶಕ್ಕೆ ಪಡೆಯಲಾಗಿತ್ತು. ವಶಪಡಿಸಿಕೊಂಡವರನ್ನು ವೈದ್ಯಕೀಯ ತಪಾಸಣೆ ನಡೆಸಿದಾಗ, ವೈದ್ಯಕೀಯ ಪರೀಕ್ಷಾ ವರದಿಯಲ್ಲಿ “TETRAHYDRACANNABINOID (MARIJUANA) is Positive” ಎಂದು ವರದಿ ಬಂದಿದೆ. ಆದ್ದರಿಂದ ಆಪಾಧಿತರ ವಿರುದ್ಧ ಕಲಂ: 27(ಬಿ) ಎನ್.ಡಿ.ಪಿ.ಎಸ್ ಕಾಯ್ದೆ- 1985 ಪ್ರಕಾರ ಪ್ರಕರಣ ದಾಖಲಿಸಲಾಗಿದೆ.

Edited By : Vijay Kumar
Kshetra Samachara

Kshetra Samachara

13/12/2024 12:26 pm

Cinque Terre

6.16 K

Cinque Terre

0

ಸಂಬಂಧಿತ ಸುದ್ದಿ