ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ವಿರೋಧಿ ಹೇಳಿಕೆ ನೀಡಿರುವ ಸಾಮಾಜಿಕ ಕಾರ್ಯಕರ್ತೆಗೆ ವ್ಯಕ್ತಿಯೊಬ್ಬ ಗ್ಯಾಂಗ್ ರೇಪ್ ಬೆದರಿಕೆ ಒಡ್ಡಿದ್ದಾನೆ. ಈ ಬಗ್ಗೆ ಮಂಗಳೂರಿನ ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಮೀಳಾ ಎಂ. ಎಂಬವರು ಬಿಜೆಪಿಯ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ 'ಬಿಜೆಪಿ ಎಂಬ ಹಿಂದೂ ಕೋಮುವಾದಿ ಪಕ್ಷದಿಂದಾಗಿ ಎಸ್ ಡಿಪಿಐ ಎಂಬ ಮುಸ್ಲಿಂ ಕೋಮುವಾದಿ ಪಕ್ಷ ಹುಟ್ಟಿದೆ. ಈಗ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿರುವಾಗ ಎಸ್ ಡಿಪಿಐಯನ್ನು ಬ್ಯಾನ್ ಮಾಡಲು ಸಾಧ್ಯ. ಆದರೆ, ಇವರು ಬ್ಯಾನ್ ಮಾಡಲ್ಲ, ಯಾಕೆಂದರೆ ಇದರಿಂದ ಬಿಜೆಪಿಗೆ ಲಾಭ ಇದೆ ಎಂದು ಬರೆದಿದ್ದರು.
ಇದಕ್ಕೆ ಜಾಲತಾಣದಲ್ಲಿ ಬಾಬುರಾವ್ ಸರ್ದೇಸಾಯಿ ಎಂಬಾತ ಇಂತವರನ್ನು ಗ್ಯಾಂಗ್ ರೇಪ್ ಮಾಡಬೇಕು ಎಂದು ಬೆದರಿಕೆ ಒಡ್ಡಿದ್ದಾನೆ. ಅಲ್ಲದೆ, ಅವಾಚ್ಯವಾಗಿಯೂ ನಿಂದಿಸಿದ್ದಾನೆ.
ಈ ಬಗ್ಗೆ ಮಹಿಳಾ ನ್ಯಾಯವಾದಿ ನೇತೃತ್ವದಲ್ಲಿ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.
Kshetra Samachara
02/01/2021 06:55 pm