ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಳ್ಳಾಲ: ಅಡ್ಡಾದಿಡ್ಡಿ ಕಾರು ಚಾಲನೆ: ಪ್ರಶ್ನಿಸಿದ್ದಕ್ಕೆ ಮಾರಣಾಂತಿಕ ಹಲ್ಲೆ

ಮಂಗಳೂರು: ಅಡ್ಡಾದಿಡ್ಡಿ ವಾಹನ ಚಲಾಯಿಸಿರುವ ಪ್ರಶ್ನಿಸಿದ ದಂಪತಿಗೆ ನೆರೆಮನೆಯ ನಾಲ್ವರು ಸೇರಿ ಕಟ್ಟಿಗೆಯಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಉಳ್ಳಾಲದಲ್ಲಿ ನಡೆದಿದೆ.

ಉಳ್ಳಾಲದ ಹೊಯ್ಗೆ ನಿವಾಸಿ ಸ್ಟೀವನ್‌ ಡಿಸೋಜ(40) ಹಾಗೂ ಪತ್ನಿ ವೀಣಾ ಡಿಸೋಜ(30) ಹಲ್ಲೆಗೊಳಗಾದವರು. ನೆರೆಮನಯ ಪ್ರಕಾಶ್‌ ಡಿಸೋಜ, ಮಧುಜೀವನ್‌ ಡಿಸೋಜ ಆತನ ಪತ್ನಿ ಕೀರ್ತಿ ಡಿಸೋಜ ಹಾಗೂ ಚೇತನ್‌ ಡಿಸೋಜ ಹಲ್ಲೆ ನಡೆಸಿದವರು.

ತೊಕ್ಕೊಟ್ಟು ಚಚ್‌೯ನಿಂದ ದಂಪತಿ ನಡೆದುಕೊಂಡು ಮನೆಗೆ ವಾಪಸ್ ಬರುತ್ತಿದ್ದರು. ಈ ವೇಳೆ ನೆರೆಮನೆಯವರು ಕಾರನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸಿದ್ದಾರೆ. ಆ ರಸ್ತೆಯೂ ಅವ್ಯವಸ್ಥೆಯಿಂದ ಕೂಡಿದ್ದ ಕಾರಣ ದಂಪತಿ ಅಪಘಾತದಿಂದ ಸ್ವಲ್ಪದರಲ್ಲೇಪಾರಾಗಿದ್ದಾರೆ. ಇದನ್ನು ಸ್ಟೀವನ್‌ ಅವರು ನೆರೆಮನೆಗೆ ತೆರಳಿ ಪ್ರಶ್ನಿಸಿದ್ದರು.

ಇದರಿಂದ ಕುಪಿತಗೊಂಡ ನೆರೆಮನೆಯ ತಂಡ ಅಕ್ರಮವಾಗಿ ಸ್ಟೀವನ್‌ ಅವರ ಮನೆಯೊಳಗೆ ಪ್ರವೇಶಿಸಿ ದಂಪತಿಗೆ ಕಟ್ಟಿಗೆಯಿಂದ ತಲೆ, ಕಾಲು, ಬೆನ್ನು, ಸೊಂಟದ ಭಾಗಕ್ಕೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದೆ. ಹಲ್ಲೆಗೊಳಗಾದ ಇಬ್ಬರು ಉಳ್ಳಾಲದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯನ್ನು ಪಡೆದಿದ್ದಾರೆ. ಈ ಕುರಿತು ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagaraj Tulugeri
Kshetra Samachara

Kshetra Samachara

02/01/2021 04:07 pm

Cinque Terre

15.14 K

Cinque Terre

0

ಸಂಬಂಧಿತ ಸುದ್ದಿ