ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತೊಕ್ಕೊಟ್ಟು: ಮಹಿಳೆಯ ಕತ್ತಿನಿಂದ ಚಿನ್ನದ ಸರ ಕಿತ್ತು ಕಳ್ಳರು ಪರಾರಿ

ತೊಕ್ಕೊಟ್ಟು: ಬೈಕ್‌ನಲ್ಲಿ ಬಂದ ಇಬ್ಬರು ಕಳ್ಳರು ಒಂಟಿ ಮಹಿಳೆಯ ಕತ್ತಿನಿಂದ ಸರ ಕಿತ್ತು ಅಲ್ಲೇ ಕೈ ಚೆಲ್ಲಿ ಹೋದ ಘಟನೆ ಭಟ್ನಗರದಲ್ಲಿ ಭಾನುವಾರ ರಾತ್ರಿ ನಡೆದಿದೆ.

ಚೆಂಬುಗುಡ್ಡೆ ರುದ್ರಭೂಮಿ ಬಳಿಯ ನಿವಾಸಿ ಹರೀಶ್‌ ಟೈಲರ್‌ ಅವರ ಪತ್ನಿ ಲಕ್ಷ್ಮಿ ಶೆಟ್ಟಿ (30) ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದರು. ಈ ವೇಳೆ ಹಿಂಬದಿಯಿಂದ ಬೈಕ್‌ನಲ್ಲಿ ಬಂದ ಇಬ್ಬರು ಕಳ್ಳರು ಅವರ ಕತ್ತಿನಲ್ಲಿದ್ದ ಚಿನ್ನದ ಸರ ಎಳೆದಿದ್ದು, ಸರ ತುಂಡಾಗಿ ರಸ್ತೆಗೆ ಬಿದ್ದಿದೆ. ಇನ್ನೇನು ಕಳ್ಳರು ಅದನ್ನು ತೆಗೆದುಕೊಳ್ಳಲು ಯತ್ನಿಸಿದಾಗ ಮಹಿಳೆ ಬೊಬ್ಬಿಟ್ಟಿದ್ದು ತಕ್ಷಣವೇ ಕಳ್ಳರು ಪರಾರಿಯಾಗಿದ್ದಾರೆ.

ಈ ವೇಳೆ ಸ್ಥಳದಲ್ಲಿದ್ದ ಯುವಕರು ಕಳ್ಳರನ್ನು ಬೈಕ್‌ನಲ್ಲಿ ಬೆನ್ನಟ್ಟಿದ್ದಾರೆ. ಆದರೆ ಕಳ್ಳರು ಕೋಟೆಕಾರಿನ ಕಡೆಗೆ ಪಲಾಯನ ಮಾಡಿದ್ದಾರೆ. ಉಳ್ಳಾಲ ಠಾಣೆ ಪಿಎಸ್‌ಐ ಪ್ರದೀಪ್‌ ಹಾಗೂ ತಂಡ ಪರಿಶೀಲನೆ ನಡೆಸಿ ಮಾಹಿತಿ ಕಲೆಹಾಕಿದ್ದು ಕಳ್ಳರ ಶೋಧ ಕಾರ್ಯ ನಡೆಸುತ್ತಿದ್ದಾರೆ.

Edited By : Vijay Kumar
Kshetra Samachara

Kshetra Samachara

28/12/2020 03:26 pm

Cinque Terre

14.39 K

Cinque Terre

1

ಸಂಬಂಧಿತ ಸುದ್ದಿ