ಚಿನ್ನ ಖರೀದಿಗೆ ನಕಲಿ ಚೆಕ್ ನೀಡಿ ವಂಚಿಸಲು ಯತ್ನಸಿದ ಚಾಲಾಕಿ ಮಹಿಳೆಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಮಂಗಳೂರಿನ ಉಳ್ಳಾಲದ ಚಿನ್ನದಂಗಡಿಯೊಂದರಲ್ಲಿ ಚಿನ್ನ ಖರೀದಿಸಿದ ಈ ಮಹಿಳೆ 7ಲಕ್ಷ ರೂ ಮೌಲ್ಯದ ಚೆಕ್ ಕೊಟ್ಟು ವಂಚನೆ ಮಾಡಿದ್ದಾರೆ.
ಈ ಆರೋಪದ ಹಿನ್ನಲೆಯಲ್ಲಿ ಕುಪ್ಪೆಪದವಿನ ಮೂಲದ ಫರೀದಾ ಬೇಗಂ ಈಗ ಪೊಲೀಸರ ಅತಿಥಿಯಾಗಿದ್ದಾಳೆ.
ಕೈಕಂಬದ ಚಿನ್ನದಂಗಡಿಗೆ ತನ್ನ ಪತಿಯೊಂದಿಗೆ ಬಂದ ಈಕೆ 7.30 ಲಕ್ಷ ಮೌಲ್ಯದ ಚಿನ್ನಾಭರಣ ಖರೀದಿಸಿ ಚೆಕ್ ನೀಡಿದ್ದರು.
ಆದ್ರೆ ಚೆಕ್ ನಲ್ಲಿಯ ಸಹಿ ಹಾಗೂ ಅದರ ಬ್ಯಾಂಕ್ ಖಾತೆಗೆ ಸಾಮ್ಯತೆ ಇರದಿದ್ದಾಗ ಈ ವಂಚನೆ ಪ್ರಕರಣ ಬಯಲಾಗಿದೆ.
ಕಾರ್ಯಪ್ರವೃತ್ತರಾದ ಮಂಗಳೂರು ಬಜ್ಪೆ ಪೊಲೀಸರು ಉಳ್ಳಾಲದ ಧರ್ಮನಗರದ ಮನೆಯಲ್ಲಿದ್ದ ಆರೋಪಿ ಫರೀದಾ ಬೇಗಂ ಅವರನ್ನ ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಾಥ್ ನೀಡಿದ್ದ ಆಕೆಯ ಪತಿ ರಮೀಝ್ ಎಂಬಾತ ಈಗ ತಲೆಮರೆಸಿಕೊಂಡಿದ್ದು ಅತನ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
Kshetra Samachara
21/10/2020 11:56 am