ಬಂಟ್ವಾಳ: ತಾಲೂಕಿನ ಸೂರಿಕುಮೇರು ಸಮೀಪದ ದಾಸಕೋಡಿ ಪೆಟ್ರೋಲ್ ಬಂಕ್ ಗೆ ಭಾನುವಾರ ಮುಂಜಾನೆ ಆಗಮಿಸಿದ ತಂಡವೊಂದು ಸಿಬಂದಿಯನ್ನು ಬೆದರಿಸಿ ನಗದು ದೋಚಿದ ಘಟನೆ ನಡೆದಿದೆ.
ಭಾನುವಾರ ಮುಂಜಾನೆ ಬೈಕಿನಲ್ಲಿ ಬಂದ ಮೂವರು ವ್ಯಕ್ತಿಗಳು ಇಬ್ಬರು ಕೆಲಸಗಾರರಿಗೆ ಚೂರಿ, ರಾಡ್ ತೋರಿಸಿ ಹಣ ನೀಡುವಂತೆ ಒತ್ತಾಯಿಸಿದ್ದು, ಹಣ ನೀಡದಿದ್ದಲ್ಲಿ ಕೊಲ್ಲುವುದಾಗಿ ಬೆದರಿಸಿದ್ದಾರೆ.
ಬಳಿಕ 22 ಸಾವಿರ ರೂ. ದೋಚಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಸ್ಥಳಕ್ಕೆ ಬಂಟ್ವಾಳ ನಗರ ಠಾಣಾ ಅಪರಾಧ ವಿಭಾಗದ ಪಿಎಸ್ಐ ಕಲೈಮಾರ್, ಎ.ಎಸ್.ಐ. ಶೈಲೇಶ್, ಎಚ್.ಸಿ.ಸುರೇಶ್ ಪಡಾರ್, ಕೃಷ್ಣ ಕುಲಾಲ್ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.
ಈ ಕಳ್ಳರ ತಂಡ ಬಂಟ್ವಾಳ ಸೇರಿದಂತೆ ಮಂಗಳೂರಿನ ಹಲವು ಪೆಟ್ರೋಲ್ ಬಂಕ್ ಗಳಿಗೆ ನುಗ್ಗಿ ಹಣ ದೋಚುವುದಕ್ಕೆ ಪ್ರಯತ್ನಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Kshetra Samachara
20/09/2020 06:33 pm