ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ನಾನಾ ಕಡೆ ಕಳವು; ಖತರ್ನಾಕ್ ಚೋರ ದಂಪತಿ ಅಂದರ್

ಮುಲ್ಕಿ: ಮುಲ್ಕಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಕಳ್ಳತನ ಪ್ರಕರಣಗಳ ಬಗ್ಗೆ ಮುಲ್ಕಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಆರೋಪಿಗಳನ್ನು ಧಾರವಾಡ ಟೋಲ್ ನಾಕಾ ಜನತಾನಗರ ಬಳಿಯ ನಿವಾಸಿ ರಾಜೇಶ್ ನಾಯ್ಕ ಆಲಿಯಾಸ್ ರಾಜ ಯಾನೆ ರಾಜು ಪಾಮಡಿ(42) ಮತ್ತು ಆತನ ಪತ್ನಿ ಪದ್ಮಾ ಪಾಮಡಿ (37)ಎಂದು ಗುರುತಿಸಲಾಗಿದೆ.

ಆರೋಪಿಗಳು ಕಳೆದ ತಿಂಗಳ ಹಿಂದೆ ಪೊಲೀಸ್ ಠಾಣಾ ವ್ಯಾಪ್ತಿಯ ಚರಂತಿಪೇಟೆ ಬಳಿಯ ಹಸನಬ್ಬ ಮತ್ತು ಸೋಮಸುಂದರ್ ಎಂಬವರ ಮನೆ ಕಳ್ಳತನ ಹಾಗೂ ಅಕ್ಕಸಾಲಿಗರ ಕೇರಿಯ ಪುರಾತನ ಶ್ರೀ ಮಾರಿಯಮ್ಮನವರ ದೇವಸ್ಥಾನದಲ್ಲಿ ಹಾಗೂ ಶ್ರೀ ಮೂಕಾಂಬಿಕಾ ಮಂದಿರದಲ್ಲಿ, ಚರಂತಿಪೇಟೆಯ ಪ್ರಕಾಶ್ ಜುವೆಲ್ಲರ್ಸ್ ನಲ್ಲಿ ಕಳ್ಳತನ ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳಿಂದ 62 ಗ್ರಾಂ ಚಿನ್ನಾಭರಣ,2 ಕೆಜಿ 500 ಗ್ರಾಂ ಬೆಳ್ಳಿ ಸಾಮಗ್ರಿ ಸೇರಿ ಒಟ್ಟು 3,98,000ರೂ. ಮೌಲ್ಯದ ಸೊತ್ತು ವಶಪಡಿಸಲಾಗಿದೆ. ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ನಿರ್ದೇಶನದಂತೆ ಉಪಪೊಲೀಸ್ ಆಯುಕ್ತರಾದ ಹರಿರಾಮ್ ಶಂಕರ್, ವಿನಯ ಎ.ಗಾಂವ್ಕರ್ ಮಾರ್ಗದರ್ಶನದಲ್ಲಿ ಸಹಾಯಕ ಪೊಲೀಸ್ ಆಯುಕ್ತ ಬೆಳ್ಳಿಯಪ್ಪ ನೇತೃತ್ವದಲ್ಲಿ ವೈಫಿ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಕುಸುಮಾಧರ, ಉಪನಿರೀಕ್ಷಕ ದೇಜಪ್ಪ, ವಿನಾಯಕ ತೋರಗಲ್, ಎಎಸ್ಸೈ ಚಂದ್ರಶೇಖರ್ ಮತ್ತಿತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Edited By : Nirmala Aralikatti
Kshetra Samachara

Kshetra Samachara

14/12/2020 07:10 pm

Cinque Terre

18.58 K

Cinque Terre

0

ಸಂಬಂಧಿತ ಸುದ್ದಿ