ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಉಗ್ರ ಪರ ಗೋಡೆ ಬರಹ ಆರೋಪಿ ಬಂಧನ ಶ್ಲಾಘನೀಯ; SDPI

ಮಂಗಳೂರು: ನಗರದ ಕದ್ರಿ ಬಳಿಯ ಬಿಜೈ ಮತ್ತು ಪಿವಿಎಸ್ ಸಮೀಪದ ನ್ಯಾಯಾಲಯದ ಬಳಿ ಇರುವ ಹಳೆಯ ಪೊಲೀಸ್ ಚೌಕಿಯ ಗೋಡೆಯಲ್ಲಿ ಉಗ್ರ ಪರ ಮತ್ತು ವಿವಾದಾತ್ಮಕ ಬರಹ ಬರೆದು ಜಿಲ್ಲೆಯ ಶಾಂತಿಯನ್ನು ಕದಡಲು ದೇಶದ್ರೋಹಿಗಳು ಪ್ರಯತ್ನಿಸಿದ್ದು, ಇದೀಗ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯೊಬ್ಬನನ್ನು ಮಂಗಳೂರು ಪೊಲೀಸರು ಬಂಧಿಸಿರುವುದನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾ ಸಮಿತಿ ಶ್ಲಾಘಿಸಿದೆ.

ಅದೇ ರೀತಿ ಆರೋಪಿಗೆ ಇಂತಹ ಉಗ್ರ ಬರಹವನ್ನು ಬರೆಯಲು ಸಹಕಾರ ಮಾಡಿದ ಎಲ್ಲ ಆರೋಪಿಗಳನ್ನು ಬಂಧಿಸಿ ಪೊಲೀಸ್ ಇಲಾಖೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಇದರ ಹಿಂದಿರುವ ಷಡ್ಯಂತ್ರ ಬಯಲಿಗೆಳೆಯಬೇಕೆಂದು ಎಸ್‌ಡಿಪಿಐ ದ.ಕ. ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಆಗ್ರಹಿಸಿದ್ದಾರೆ‌.

Edited By : Nirmala Aralikatti
Kshetra Samachara

Kshetra Samachara

03/12/2020 05:06 pm

Cinque Terre

8.31 K

Cinque Terre

1

ಸಂಬಂಧಿತ ಸುದ್ದಿ