ಕಾರವಾರ: ತಾಲೂಕಿನ ಶಿರವಾಡಾದ ರೈಲ್ವೆ ನಿಲ್ದಾಣದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಇಲ್ಲಿನ ಜಿಲ್ಲಾ ಸಿಇಎನ್ ಅಪರಾಧ ವಿಭಾಗದ ಪೊಲೀಸರು ಬಂಧಿಸಿ, ಗಾಂಜಾ ಹಾಗೂ ಒಟ್ಟೂ 4.54 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ತಾಲೂಕಿನ ಬಂಗಾರಪ್ಪ ನಗರದ ಕಿಶನ್ ಬಾಂದೇಕರ್ (27), ಗೋವಾದ ಕಾಣಕೋಣ ಮೂಲದ ಗಂಗೇಶ ಪಾಥರಪೆಕರ್ (27) ಹಾಗೂ ಗೋಹಿಲ್ ಬೈರೆಲಿ (29) ಬಂಧಿತರು.
ಆರೋಪಿಗಳು ತಾಲೂಕಿನ ಶಿರವಾಡದ ರೈಲ್ವೆ ನಿಲ್ದಾಣದ ಬಳಿಯ ಸಾರ್ವಜನಿಕ ಪ್ರದೇಶದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಸಂದರ್ಭ ಕಾರವಾರದ ಅಪರಾಧ ವಿಭಾಗದ ಪೊಲೀಸರು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.
ಬಂಧಿತರಿಂದ 20 ಸಾವಿರ ರೂ. ಮೌಲ್ಯದ 1.40 ಕೆಜಿ ಗಾಂಜಾ, 4 ಲಕ್ಷ ರೂ. ಮೌಲ್ಯದ ವ್ಯಾಗನರ್ ಕಾರು, 25 ಸಾವಿರ ರೂ. ಮೌಲ್ಯದ ಬೈಕ್, ಮೂರು ಮೊಬೈಲ್ ಸೇರಿ, ಒಟ್ಟು 4.54 ಲಕ್ಷ ಮೌಲ್ಯದ ಸೊತ್ತು ವಶಕ್ಕೆ ಪಡೆದುಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸೀತಾರಾಮ್ ಪಿ., ಸಿಬ್ಬಂದಿ ಉಮೇಶ ನಾಯ್ಕ, ಸುದರ್ಶನ ನಾಯ್ಕ, ಮಂಜುನಾಥ ಹೆಗಡೆ, ಹನುಮಂತ ಕಬಾಡಿ, ಸುರೇಶ ನಾಯ್ಕ, ಶಿವಾನಂದ ತಾನಸಿ, ಶರತಕುಮಾರ್ ಬಿ.ಎಸ್., ನಾರಾಯಣ ಎಂ.ಎಸ್., ಭರತೇಶ ಸದಲಗಿ, ಚಂದ್ರಶೇಖರ್ ಪಾಟೀಲ್ ಇದ್ದರು.
Kshetra Samachara
13/10/2020 09:41 pm