ಮುಲ್ಕಿ: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇಗುಲಕ್ಕೆ ಚಿತ್ರನಟ ವಿಜಯ ರಾಘವೇಂದ್ರ ಕುಟುಂಬ ಸಹಿತ ಶನಿವಾರ ಭೇಟಿ ನೀಡಿ, ಸೀರೆ ಕಾಣಿಕೆ ಸಮರ್ಪಿಸಿದರು. ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಪ್ರಸಾದ ನೀಡಿದರು. ಈ ಸಂದರ್ಭ ದೇಗುಲಕ್ಕೆ ಬಂದಿದ್ದ ಭಕ್ತರು, ಶಾಲಾ ವಿದ್ಯಾರ್ಥಿಗಳು ವಿಜಯ ರಾಘವೇಂದ್ರ ಜೊತೆಗೆ ಸೆಲ್ಫಿ ತೆಗೆದುಕೊಂಡು ಖುಷಿ ಪಟ್ಟರು.
ಬಳಿಕ ವಿಜಯ ರಾಘವೇಂದ್ರ ಅವರು ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ಅರ್ಚಕ ರಾಮದಾಸ ಆಚಾರ್ಯ, ಅನಂತಕೃಷ್ಣ ಆಚಾರ್ಯ, ವ್ಯವಸ್ಥಾಪನಾ ಸಮಿತಿಯ ರವೀಂದ್ರ ಎಚ್. ಶೆಟ್ಟಿ, ರಘುವೀರ ಶೆಣೈ, ರವಿಶಂಕರ ಪೈ ಮತ್ತಿತರರು ಉಪಸ್ಥಿತರಿದ್ದರು. ಜಾರಿಗೆಕಟ್ಟೆ ಸ್ವಾಮಿ ಕೊರಗಜ್ಜ ಕ್ಷೇತ್ರಕ್ಕೂ ಕುಟುಂಬದೊಂದಿಗೆ ಆಗಮಿಸಿದ ವಿಜಯ ರಾಘವೇಂದ್ರ ಅವರು ಪ್ರಾರ್ಥನೆ ಸಲ್ಲಿಸಿ, ಅಜ್ಜನ ಪ್ರಸಾದ ಸ್ವೀಕರಿಸಿದರು.
Kshetra Samachara
20/02/2021 12:39 pm