ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಕ್ಷಿಕೆರೆ: ಮುಂಗಾರು ಚುರುಕು;ಕೃಷಿ ಕಾರ್ಯಕ್ಕೆ ಚಾಲನೆ

ಮುಲ್ಕಿ: ಮಳೆಗಾಲ ಆರಂಭವಾಗುತ್ತಿದ್ದಂತೆ ಕಳೆದ 40 ವರ್ಷಗಳಿಂದ ಸಂಪ್ರದಾಯಿಕ ಕೃಷಿಯಲ್ಲಿ ತೊಡಗಿಕೊಂಡಿರುವ ಪಕ್ಷಿಕೆರೆ ಸಮೀಪದ ಪಂಜ ಕೊಯಿಕುಡೆ ಸತೀಶ್ ಎಂ ಶೆಟ್ಟಿ ಪಂಜ ಬೈಲಗುತ್ತು ರವರ ಗದ್ದೆಯಲ್ಲಿ ಕೃಷಿ ಕಾರ್ಯ ಆರಂಭವಾಗಿದೆ.

ಇಂದಿನ ಕಾಲದಲ್ಲಿ ಕೃಷಿ ಚಟುವಟಿಕೆಯತ್ತ ಯುವಜನತೆ ವಿಮುಖರಾಗುತ್ತಿದ್ದರೂ ಕೃಷಿಯನ್ನೇ ಜೀವನಾಧಾರ ಮಾಡಿಕೊಂಡಿರುವ ಸತೀಶ್ ಶೆಟ್ಟಿ ದೂರದ ಉತ್ತರ ಕರ್ನಾಟಕದ ಗಂಗಾವತಿ, ಬಾಗಲಕೋಟೆ ಮೂಲದ ಕೃಷಿ ಕಾರ್ಮಿಕರನ್ನು ಕರೆತಂದು ಕೃಷಿಯಲ್ಲಿ ತೊಡಗಿಕೊಂಡಿದ್ದು ನೇಜಿ ನಡುವ ಸೊಬಗು ಹಿಂದಿನ ಕಾಲದ ಕೃಷಿಯ ಕೈಕನ್ನಡಿಯಂತಿದೆ.

ಜೂನ್ ತಿಂಗಳ ಪ್ರಾರಂಭದಲ್ಲೇ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ಸತೀಶ್ ಶೆಟ್ಟಿ ಸುತ್ತಮುತ್ತಲಿನ ಪರಿಸರದಲ್ಲಿ ಕೃಷಿ ಸಹಿತ ವಿವಿಧ ಸಾಮಾಜಿಕ ಧಾರ್ಮಿಕ ಚಟುವಟಿಕೆಗಳಲ್ಲಿ ಪ್ರಸಿದ್ಧಿ ಪಡೆದಿದ್ದಾರೆ.

Edited By : PublicNext Desk
Kshetra Samachara

Kshetra Samachara

08/06/2022 04:34 pm

Cinque Terre

1.23 K

Cinque Terre

0

ಸಂಬಂಧಿತ ಸುದ್ದಿ