ಬಂಟ್ವಾಳ:ಕರಾವಳಿ ಭಾಗದ ರೈತರ ಕೃಷಿ ಭೂಮಿಯನ್ನು ವಿವಿಧ ಯೋಜನೆಗಳ ಹೆಸರಿನಲ್ಲಿ ನಾಶ ಮಾಡುವ ಕಾರ್ಯ ಮಾಡಲಾಗುತ್ತಿದೆ. ಕೃಷಿ ಭೂಮಿಯನ್ನು ಹಾಳು ಮಾಡಿ ರೈತರನ್ನು ಒಕ್ಕಲೆಬ್ಬಿಸಿ ಕೈಗಾರಿಕಾ ಪ್ರದೇಶ ಮಾಡುವ ಹುನ್ನಾರವಿದ್ದರೆ ತಕ್ಷಣ ಕೈಬಿಡಬೇಕು. ಯೋಜನೆಯ ಸಮಗ್ರ ಮಾಹಿತಿಯನ್ನು ಬಹಿರಂಗ ಪಡಿಸಿ, ರೈತಾಪಿ ವರ್ಗಕ್ಕೆ ನ್ಯಾಯ ಒದಗಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬಳಗುತ್ತು ಆಗ್ರಹಿಸಿದ್ದಾರೆ.
ಒಂದು ಯೋಜನೆಯನ್ನು ಜಾರಿ ಮಾಡುವ ಸಂದರ್ಭ ಸಾಧಕ ಬಾಧಕಗಳನ್ನು ಜನರ ಗಮನಕ್ಕೆ ತಂದು, ಅಭಿಪ್ರಾಯಗಲನ್ನು ಸಂಗ್ರಹಿಸಿ, ಪರಿಹಾರಗಳನ್ನು ವಿತರಣೆ ಮಾಡುವುದು ಕ್ರಮವಾಗಿದೆ. ೨೦೧೩ರಲ್ಲಿ ಪ್ರಾರಂಭವಾದ ಪಡುಬಿದರೆ - ಕಾಸರಗೋಡು ಸಂಪರ್ಕ ಕಲ್ಪಿಸುವ ೪೦೦ಕೆವಿ ವಿದ್ಯುತ್ ಮಾರ್ಗದ ಎಲ್ಲಾ ಸರ್ವೇ ಕಾರ್ಯವನ್ನು ಮಾಹಿತಿ ನೀಡದೆ ನಡೆಸಲಾಗಿದೆ. ವಿದ್ಯುತ್ ಟವರ್ ನಿರ್ಮಾಣಕ್ಕಾಗಿ ಗುಪ್ತವಾಗಿ ದಾಖಲೆ ಪತ್ರಗಳ ಕಾರ್ಯ ಮಾಡಿರುವುದು ಸರಿಯಲ್ಲ ಎಂದು ವಿಟ್ಲ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಯೋಜನೆಯನ್ನು ಜಾರಿ ಮಾಡುವ ಮೊದಲು ರೈತ ಸಂತ್ರಸ್ತರನ್ನು ಕರೆದು ಮಾತುಕತೆಯನ್ನು ಸ್ಥಳೀಯ ಮಟ್ಟದಲ್ಲಿ ಮಾಡದೇ ಹೋದಲ್ಲಿ ರಾಜ್ಯಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಛೇರಿ ಮುಂದೆ ನಿರಂತರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
Kshetra Samachara
29/01/2021 07:27 pm