ಮೂಡುಬಿದಿರೆ: ಬಿರುವೆರ್ ಕುಡ್ಲ ಸಂಘಟನೆಯ ಬೆದ್ರ ಘಟಕದ ಸದಸ್ಯರು ಬೆಳ್ತಂಗಡಿ ತಾಲೂಕಿನ ಮರೋಡಿಯಲ್ಲಿ ಸುಮಾರು 4 ಎಕ್ರೆ ಹಡಿಲು ಇದ್ದ ಗದ್ದೆಯನ್ನು ಸಾಗುವಳಿ ಮಾಡಿದ್ದು, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಹಾಗೂ ಬೆಳ್ತಂಗಡಿಯ ಮಾಜಿ ಶಾಸಕ ವಸಂತ ಬಂಗೇರ ಭಾನುವಾರ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಬಿರುವೆರ್ ಕುಡ್ಲ ಬೆದ್ರ ಘಟಕದ ಯುವಕರ ಕೃಷಿ ಕಾರ್ಯವು ಇತರ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ, ವಿಶಿಷ್ಟವಾದ ಯೋಜನೆಯೊಂದಿಗೆ ಮಾಡಿದ ಕಾರ್ಯವು ಯಶಸ್ವಿಯಾಗಲಿ ಎಂದು ಅಭಯಚಂದ್ರ ಜೈನ್ ಶುಭ ಹಾರೈಸಿದರು.
ಇದೇ ವೇಳೆ ಮಾತನಾಡಿದ ವಸಂತ ಬಂಗೇರ, ಅಕ್ಕಿ ದಾನ ನೀಡುವ ಕಾರ್ಯವೇ ಶ್ರೇಷ್ಠ ಗೋಶಾಲೆಗಳಿಗೆ ಬೈ ಹುಲ್ಲು ದಾನ ಮಾಡುವ ಕಾರ್ಯ ಇನ್ನೂ ಶ್ರೇಷ್ಠ ಬಿರುವೆರ್ ಕುಡ್ಲದ ಮಾದರಿ ಸೇವೆ ಎಂದು ಶ್ಲಾಘಿಸಿದರು.
ಗದ್ದೆಯ ಯಜಮಾನ ಚಂದಪ್ಪ ಪೂಜಾರಿ, ಮೂಡುಬಿದಿರೆ ಯುವ ಕಾಂಗ್ರೆಸ್ನ ಅಧ್ಯಕ್ಷ ಚಂದ್ರಹಾಸ ಸನಿಲ್, ಬೆಳ್ತಂಗಡಿ ತಾಲೂಕು ಪಂಚಾಯಿತಿ ಸದಸ್ಯೆ ರೂಪಲತಾ, ಕಾಶಿಪಟ್ಣ ಗ್ರಾಪಂ ಮಾಜಿ ಅಧ್ಯಕ್ಷ ಸತೀಶ್. ಕೆ, ಮರೋಡಿ ಗ್ರಾಪಂ ಮಾಜಿ ಅಧ್ಯಕ್ಷ ಸದಾನಂದ ಶೆಟ್ಟಿ, ಬಿರುವೆರ್ ಕುಡ್ಲ ಬೆದ್ರ ಘಟಕದ ಅಧ್ಯಕ್ಷ ರಾಜ್ ಪವಿ ಬಿಲ್ಲವ, ಕಾರ್ಯದರ್ಶಿ ಚರಣ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
12/10/2020 12:36 pm