ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಪ್ಪಿನಂಗಡಿ: ಬೈಕ್ - ಸಿಮೆಂಟ್ ಮಿಕ್ಸರ್ ವಾಹನ ಡಿಕ್ಕಿ; ಮಹಿಳೆ ಮೃತ್ಯು

ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ 75ರ ಉಪ್ಪಿನಂಗಡಿಯಲ್ಲಿ ಸಿಮೆಂಟ್ ಮಿಕ್ಸರ್ ವಾಹನ ಮತ್ತು ಬೈಕ್ ನಡುವಿನ ಅಪಘಾತದಲ್ಲಿ

ಬೈಕ್ ನ ಹಿಂಬದಿ ಕುಳಿತಿದ್ದ ಮಹಿಳೆ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.

ಮೃತಪಟ್ಟ ಮಹಿಳೆಯನ್ನು ಸರಳಿಕಟ್ಟೆ ನಿವಾಸಿ ಸಖಿನಾ ಎಂದು ಗುರುತಿಸಲಾಗಿದೆ. ಇವರ ಪತಿ ರಫೀಕ್ ಎಂಬವರಿಗೂ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.

ಉಪ್ಪಿನಂಗಡಿಯ ಆದಿತ್ಯ ಹೋಟೆಲ್ ಬಳಿ ಘಟನೆ ನಡೆದಿದ್ದು, ಸಿಮೆಂಟ್ ಮಿಕ್ಸರ್ ವಾಹನವು ಬಿ.ಸಿ.ರೋಡ್ ನಿಂದ ಉದನೆ ಕಡೆಗೆ ಹೋಗುತ್ತಿತ್ತು. ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪುತ್ತೂರು ಸಂಚಾರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

05/02/2021 08:14 pm

Cinque Terre

10.58 K

Cinque Terre

0

ಸಂಬಂಧಿತ ಸುದ್ದಿ