ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್‌ ಅಗರಿ ಎಂಟರ್ ಪ್ರೈಸರ್ಸ್‌ನಲ್ಲಿ‌ ಅಗ್ನಿ ಅವಘಡ, ಅಪಾರ ಹಾನಿ

ಮಂಗಳೂರು: ಸುರತ್ಕಲ್ ಪೇಟೆಯಲ್ಲಿ ಇಲೆಕ್ಟ್ರಾನಿಕ್ ಮತ್ತು ಫರ್ನಿಚರ್ ಮಾರಾಟಮಾಡುತ್ತಿದ್ದ ಮಳಿಗೆ ಅಗರಿ ಎಂಟರ್ ಪ್ರೈಸರ್ಸ್ ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಘಟನೆಯಿಂದ ಕೆಳ ಅಂತಸ್ತಿನಲ್ಲಿದ್ದ ಇಲೆಕ್ಟ್ರೋನಿಕ್ ಮತ್ತು ಗೃಹೋಪಯೋಗಿ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿದೆ.

ಆದರೆ, ಮೇಲಂತಸ್ತಿಗೆ ಯಾವುದೇ ರೀತಿಯ ಹಾನಿಯಾಗಿಲ್ಲ. ಅಲ್ಲದೆ, ತಡರಾತ್ರಿಯಾಗಿದ್ದ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ‌ಎಂದು ತಿಳಿದು ಬಂದಿದೆ. ಅಗ್ನಿ ಶಾಮಕ ಇಲಾಖೆಯ ಮೂರು ವಾಹನಗಳು ಸತತ ಒಂದು ಘಂಟೆಗಳ‌ಕಾಲ‌ ಕಾರ್ಯಾಚರಣೆ ನಡೆಸಿ ಬೆಂಕಿ‌ನಂದಿಸುವಲ್ಲಿ ಯಶಸ್ವಿಯಾಗಿದೆ. ಘಟನೆಗೆ ಬಿಲ್ಲಿಂಗ್ ವಿಭಾಗದಲ್ಲಾದ ಶಾರ್ಟ್ ಸಕ್ಯೂಟ್ ಕಾರಣ ಎಂದು ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ.

ಘಟನೆಯಿಂದ ಅಪಾರ ನಷ್ಟ ಸಂಭಿಸಿರುವುದಾಗಿ ಅಂದಾಜಿಸಲಾಗಿದ್ದು, ಅಧಿಕೃತ ಅಂಕಿ ಅಂಶಗಳು ಲಭ್ಯವಾಗಿಲ್ಲ. ಸುರತ್ಕಲ್‌ಠಾಣೆಯ ಪೊಲೀಸರು ಸ್ಥಳಕ್ಕೆ‌ದಾವಿಸಿದ್ದು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

23/01/2021 09:24 am

Cinque Terre

9.62 K

Cinque Terre

0

ಸಂಬಂಧಿತ ಸುದ್ದಿ