ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಡಬ: ಸೂಕ್ತ ಉದ್ಯೋಗ ಸಿಗದ ನೋವು; ಪದವೀಧರೆ ಆತ್ಮಹತ್ಯೆ

ಕಡಬ: ಪದವಿ ಶಿಕ್ಷಣ ಪಡೆದರೂ ಸರಿಯಾದ ಉದ್ಯೋಗ ಲಭಿಸದ ಹಿನ್ನೆಲೆಯಲ್ಲಿ ಮನ ನೊಂದು ಯುವತಿ ಅತ್ಮಹತ್ಯೆ ಮಾಡಿಕೊಂಡ ಘಟನೆ ಕಡಬ ತಾಲೂಕಿನ ಕೊಯಿಲ ಗ್ರಾಮದ ಪರಂಗಾಜೆ ಎಂಬಲ್ಲಿ ಬುಧವಾರ ನಡೆದಿದೆ.

ಪರಂಗಾಜೆ ಬಾಬು ಗೌಡ ಅವರ ಪುತ್ರಿ ಭವ್ಯ ಪಿ.ಬಿ. (27) ಅತ್ಮಹತ್ಯೆ ಮಾಡಿಕೊಂಡ ಯುವತಿ. ಈಕೆ ಎಕಾಂ ಪದವೀಧರೆಯಾಗಿದ್ದು, ತನ್ನ ಅರ್ಹತೆಗೆ ತಕ್ಕುದಾದ ಉದ್ಯೋಗ ಸಿಕ್ಕಿಲ್ಲ, ಹಲವು ಉದ್ಯೋಗಕ್ಕೆ ಪ್ರಯತ್ನಿಸಿದ್ದರೂ ವಿಫಲರಾಗಿದ್ದರು. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಮನೆಯೊಳಗಿನ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಈಕೆಯ ಸಹೋದರ ಉಮೇಶ್ ಕಡಬ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By :
Kshetra Samachara

Kshetra Samachara

23/09/2020 08:27 pm

Cinque Terre

12.41 K

Cinque Terre

5

ಸಂಬಂಧಿತ ಸುದ್ದಿ