ಮುಲ್ಕಿ: ರಾ.ಹೆ. 66ರ ಪಡುಪಣಂಬೂರು ಬಳಿ ದಾರಿತಪ್ಪಿ ಬಂದ ಬೃಹತ್ ಕಂಟೈನರ್ ಇಕ್ಕಟ್ಟಾದ ರಸ್ತೆಯ ಚರಂಡಿಯಲ್ಲಿ ಅಪಾಯಕಾರಿಯಾಗಿ ವಾಲಿ ನಿಂತಿದೆ.
ಹುಬ್ಬಳ್ಳಿಯಿಂದ ನವಮಂಗಳೂರು ಬಂದರಿನತ್ತ ಸಾಗುತ್ತಿದ್ದ ಕಂಟೈನರ್ ಚಾಲಕ ರಂಜಿತ್ ಎಂಬಾತನಿಗೆ ದಾರಿತಪ್ಪಿ ಪಡುಪಣಂಬೂರು ತೋಕೂರು ಒಳ ರಸ್ತೆಯ ಕೋರ್ದಬ್ಬು ದೈವಸ್ಥಾನದ ಬಳಿ ಮುಂದಕ್ಕೆ ಹೋಗಲು ಆಗದೆ ಹಿಂದಕ್ಕೆ ಬರಲೂ ಆಗದೆ ಅಪಾಯಕಾರಿ ರೀತಿಯಲ್ಲಿ ಚರಂಡಿಯಲ್ಲಿ ವಾಲಿ ನಿಂತಿದೆ.
ಕೂಡಲೇ ಕಂಟೈನರ್ ಮಾಲೀಕರು 3 ಟ್ರೈನ್ ಹಾಗೂ ಒಂದು ಜೆಸಿಬಿ ಮೂಲಕ ಕಂಟೈನರ್ ಮೇಲಕ್ಕೆತ್ತಲು ಪ್ರಯತ್ನ ಮಾಡುತ್ತಿದ್ದಾರೆ.
ಆಕಸ್ಮಿಕವಾಗಿ ಚರಂಡಿ ಇಲ್ಲದೆ ಹೋಗುತ್ತಿದ್ದರೆ ಕಂಟೈನರ್ ಕೋರ್ದಬ್ಬು ದೈವಸ್ಥಾನ ದ ಬಳಿ ಬಿದ್ದು ಭಾರಿ ಅನಾಹುತ ಸಂಭವಿಸುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಕಂಟೈನರ್ ಚಾಲಕ ಹೆದ್ದಾರಿ ಬಿಟ್ಟು ಪಡುಪಣಂಬೂರು ಒಳ ರಸ್ತೆಗೆ ಬಂದ ಬಗ್ಗೆ ಸ್ಥಳೀಯರು ಸಂಶಯಗೊಂಡು ಕೇಳಿದ ಪ್ರಶ್ನೆಗೆ ಅಸ್ಪಷ್ಟ ವಾಗಿ ಉತ್ತರಿಸುತ್ತಿದ್ದು, ಯಾರೋ ನಾಲ್ಕು ಮಂದಿ ಆತನನ್ನು ಹೆದ್ದಾರಿಯಲ್ಲಿ ನಿಲ್ಲಿಸಿ, ಹಾದಿ ತಪ್ಪಿಸಿದ್ದಾರೆ ಎಂದು ಹೇಳುತ್ತಿದ್ದಾನೆ.
ಕಂಟೈನರ್ ವಾಲಿದ ಪರಿಣಾಮ ಪಡುಪಣಂಬೂರು ಕಲ್ಲಾಪು ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತು.
Kshetra Samachara
13/11/2020 08:30 am