ಮಂಡ್ಯ: ಈಶ ಫೌಂಡೇಷನ್ ವತಿಯಿಂದ ಪ್ರತಿವರ್ಷ ಶಿವರಾತ್ರಿಯಂದು ನಡೆಯುವ ವಿಶೇಷ ಪೂಜೆಗೆ ಬೆಂಗಳೂರಿನಿಂದ ಕೊಯಮತ್ತೂರಿಗೆ ಕಾಲ್ನಡಿಗೆಯಲ್ಲಿ ಹೊಗುತ್ತಿದ್ದ ಭಕ್ತ ಸಮೂಹ ಈ ಬಾರಿ ವಿಶೇಷವಾಗಿ ಮೈಸೂರಿನಿಂದ ಕಾಲ್ನಡಿಗೆಯಲ್ಲಿ ಕೊಯಮತ್ತೂರಿಗೆ ಹೊರಟಿದೆ. ನಿನ್ನೆ ತಡರಾತ್ರಿ ಪಾದಯಾತ್ರಿಗಳು ಮಂಡ್ಯಕ್ಕೆ ಆಗಮಿಸಿದರು.
ವಿಷೇಶ ಶಿವನ ಮೂರ್ತಿಯನ್ನ ಪುಟ್ಟ ರಥವೊಂದರಲ್ಲಿ ಇಟ್ಟು ಶಿವ ಶಿವ ಶಿವ ಎಂದು ಸ್ತುತಿ ಮಾಡುತ್ತಾ ಬಂದ ಕೇಸರಿ ವಸ್ತ್ರಧಾರಿಗಳು ಅಲ್ಲಲ್ಲಿ ರಥ ನಿಲ್ಲಿಸಿ ಜಾತಿ ಮತ ಬೇಧವಿಲ್ಲದೆ ಎಲ್ಲರ ಕೈಯಲ್ಲಿ ಪೂಜೆ ಮಂಗಳಾರತಿ ಮಾಡಿಸುತ್ತಾ ಶಿವ ಸ್ತುತಿಗೆ ನೃತ್ಯಮಾಡುತ್ತಾ ಮಂಡ್ಯದಲ್ಲಿ ಒಂದು ಆಧ್ಯಾತ್ಮ ವಾತಾವರಣ ಸೃಷ್ಠಿಸಿದರು.
ಪಬ್ಲಿಕ್ ನೆಕ್ಸ್ಟ್‌ನೊಂದಿಗೆ ಮಾತನಾಡಿದ ಭಕ್ತ ಹಾಗೂ ಐಟಿ ಉದ್ಯೋಗಿ ವಿನಯ್ ಭಕ್ತರ ಬಳಿಗೆ ಶಿವ ಬರುವುದು ಈ ಕಾಲ್ನಡಿಗೆಯ ಮುಖ್ಯ ಉದ್ದೇಶವಾಗಿದೆ. ಆದಿಯೋಗಿಯ ಸನ್ನಿಧಿಗೆ ಬರುವವರು ಬರಲಿ ಬಾರದಿರುವವರು ಇಲ್ಲೇ ಆ ಶಿವನ ದರುಶನ ಪಡೆಯಲಿ ಅಂತ ಹೇಳಿದ್ರು.
Kshetra Samachara
24/01/2025 01:45 pm