ಮಂಡ್ಯ: ಕುಂಭಮೇಳಕ್ಕೆ ಶಾಲಾ ಮಕ್ಕಳ ದುರ್ಬಳಕೆ ಮಾಡಿಕೊಳ್ತಿರೋ ಮಂಡ್ಯ ಡಿಡಿಪಿಐ ವಿರುದ್ಧ FIR ದಾಖಲಿಸುವಂತೆ ವಕೀಲ ಬಿ.ಟಿ.ವಿಶ್ವನಾಥ್ ಆಗ್ರಹಿಸಿದ್ದಾರೆ.
ಮಂಡ್ಯದಲ್ಲಿಂದು ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ವಿಶ್ವನಾಥ್, ಮಕ್ಕಳನ್ನ ಕುಂಭಮೇಳಕ್ಕೆ ಕರೆದೊಯ್ಯಲು ಡಿಡಿಪಿಐ ಆದೇಶ ಮಾಡಿದ್ದಾರೆ. ಮಕ್ಕಳ ಕಲ್ಯಾಣ ಸಮಿತಿ ಸುಮೊಟೊ ಅರ್ಜಿ ತೆಗೆದುಕೊಂಡು ಡಿಡಿಪಿಐ ವಿರುದ್ಧ FIR ದಾಖಲು ಮಾಡಲು ಆದೇಶ ಮಾಡಿ ಮಕ್ಕಳ ರಕ್ಷಣಾ ಇಲಾಖೆ ಕ್ರಮ ಕೈಗೊಳ್ಳಬೇಕು. ಜಿಲ್ಲಾಡಳಿತ ಸಂಪೂರ್ಣ ಕುಸಿದಿದೆ. ಜನರ ತೆರಿಗೆ ಹಣ ಹಾಡಹಗಲೇ ಕುಂಭಮೇಳದಲ್ಲಿ ಲೂಟಿ ಆಗ್ತಿದೆ. ಎಸಿ ಕೋರ್ಟ್ ನಲ್ಲಿ ರೈತರ ಕೇಸ್ ಪೆಂಡಿಂಗ್ ಉಳಿದಿವೆ. ಡಿಸಿ ಕೋರ್ಟ್ ನಲ್ಲೂ ಕೂಡ ಇದೆ. ಡಿಸಿ, ಎಸಿ ಎಲ್ಲಾ ಅಧಿಕಾರಿ ವರ್ಗ ಕುಂಭಮೇಳಕ್ಕಾಗಿ ದುಡಿಯುತ್ತಿದ್ದಾರೆ. ಯಾವುದೊ ಪಕ್ಷದ ಪರ ಕೆಲಸ ಮಾಡ್ತಿದ್ದಾರೆ. ಜನ ಗಂಭೀರವಾಗಿ ಪರಿಗಣಿಸಿ ಇಂತಹವರನ್ನ ಮನೆಗೆ ಕಳುಹಿಸಿ. ಜನರ ಪರ ಕೆಲಸ ಮಾಡದೆ ಮೌಢ್ಯದ ಪರ ಕೆಲಸ ಮಾಡ್ತಿದ್ದಾರೆ ಅಂತಾ ಸಚಿವ ನಾರಾಯಣ ಗೌಡರ ವಿರುದ್ಧ ಆಕ್ರೋಶ ಹೊರ ಹಾಕಿದ್ರು.
PublicNext
13/10/2022 05:58 pm