ಮಂಡ್ಯ : ಮಂಡ್ಯದಲ್ಲಿ ಪುಡಿರೌಡಿಗಳ ಅಟ್ಟಹಾಸ ಮುಂದುವರಿದಿದ್ದು, ಎಣ್ಣೆ ಹೊಡೆಯೋಕೆ ಬಿಡಲಿಲ್ಲವೆಂದು ಹೋಟೆಲ್ ನೌಕರರ ಮೇಲೆ ರೌಡಿಗಳು ಮಚ್ಚು ಬೀಸಿದ್ದಾರೆ.
ಮಂಡ್ಯ ಜಿಲ್ಲೆ ಮದ್ದೂರಿನ ಸಿಪಾಯಿ ಹೋಟೆಲ್‌ನಲ್ಲಿ ,ಡಿಸೆಂಬರ್ 1 ರ ತಡರಾತ್ರಿ ಘಟನೆ ನಡೆದಿದ್ದು,ತಡವಾಗಿ ಬೆಳಕಿಗೆ ಬಂದಿದೆ. ಮಚ್ಚು, ಲಾಂಗ್ ಬೀಸುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮದ್ದೂರಿನ ಶಿವಪುರದ ರೌಡಿ ಶೀಟರ್ ಮನು ಹಾಗೂ ಆತನ ಸಹಚರರಿಂದ ಕೃತ್ಯ ನಡೆದಿದೆ ಎನ್ನಲಾಗಿದೆ.
ರಾತ್ರಿ 10 ಗಂಟೆ ಸಂದರ್ಭ ಸ್ನೇಹಿತರ ಜೊತೆ ಸಿಪಾಯಿ ಹೋಟೆಲ್‌ಗೆ ಎಂಟ್ರಿ ಕೊಟ್ಟಿದ್ದ ಮನು, ಊಟದ ಜೊತೆಗೆ ಎಣ್ಣೆ ಬಾಟಲ್ ಓಪನ್ ಮಾಡಿ ಪಾರ್ಟಿ ಮಾಡಲು ಮುಂದಾಗಿದ್ದಾನೆ. ಆದರೆ ಹೋಟೆಲ್ ಮ್ಯಾನೇಜರ್ ದಿಲೀಪ್ ಇಲ್ಲಿ ಎಣ್ಣೆ ಪಾರ್ಟಿಗೆ ಅವಕಾಶ ಇಲ್ಲಾ ನಿರಾಕರಿಸಿದ್ದಾರೆ.
ಈ ಮಾತಿಗೆ ದಿಲೀಪ್, ಮನು ನಡುವೆ ವಾಗ್ವಾದ ನಡೆದು ಹೋಟೆಲ್ ಸಿಬ್ಬಂದಿ ಮನು ಮತ್ತು ಸ್ನೇಹಿತರ ಮೇಲೆ ಹಲ್ಲೆ ನಡೆದಿದೆ. ಒದೆ ತಿಂದ ಮನು ಮತ್ತು ಆತನ ಸ್ನೇಹಿತರು ಹೋಟೆಲ್‌ನಿಂದ ಕಾಲ್ಕಿತ್ತಿದ್ದರು..
ಇದಕ್ಕೆ ರಿವೆಂಜ್ ತೀರಿಸಿಕೊಳ್ಳಲು ಮರುದಿನ ಮಧ್ಯರಾತ್ರಿ ಮತ್ತೆ ಹೋಟೆಲ್ ಬಳಿ ಆಗಮಿಸಿದ ಗ್ಯಾಂಗ್ ಹೋಟೆಲ್ ಮುಂದೆ ದಿಲೀಪ್ ಮತ್ತು ಚೇತನ್ ಮೇಲೆ ಸಿನಿಮಾ ಶೈಲಿಯಲ್ಲಿ ಮಚ್ಚು, ಲಾಂಗ್ ಬೀಸಿ ಹಲ್ಲೆ ನಡೆಸಿದ್ದಾರೆ.
ಹಲ್ಲೆಯಿಂದ ದಿಲೀಪ್ ಮತ್ತು ಚೇತನ್ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಗಾಯಾಳುಗಳನ್ನ ಮೈಸೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಕುರಿತು ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
03/12/2024 11:40 am