ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಡ್ಯ: ಸಾಹಿತ್ಯ ಸಮ್ಮೇಳನಕ್ಕೆ ತಾರಾ ಮೆರುಗು- ಮಂಗಳವಾರ ನಟ ಡಾಲಿ ಓಟ

ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು 2024ರ ಡಿಸೆಂಬರ್ 20, 21 ಮತ್ತು 22ರಂದು ಮಂಡ್ಯ ಜಿಲ್ಲೆಯಲ್ಲಿಸಂಘಟಿಸಲಾಗುತ್ತಿದ್ದು, ಸಮ್ಮೇಳನವನ್ನು ಬಹಳ ಅರ್ಥಪೂರ್ಣವಾಗಿ,ವಿಜೃಂಭಣೆಯಿಂದ ಎಲ್ಲರೂ ಒಟ್ಟಾಗಿ ಸೇರಿ ಆಚರಣೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಕುಮಾರ್ ತಿಳಿಸಿದರು.‌

ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ಆಯೋಜಿಸುವ ಸಲುವಾಗಿ ಹಾಗೂ ಮಂಡ್ಯ ಜಿಲ್ಲೆಯ ಜನರು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಅರಿವು ಮೂಡಿಸುವ ಸಲುವಾಗಿ "ಕನ್ನಡಕ್ಕಾಗಿ ಓಟ" ಎಂಬ ಘೋಷವಾಕ್ಯದಡಿ ಡಿಸೆಂಬರ್ 17ರಂದು ಬೆಳಿಗ್ಗೆ 7.00 ಗಂಟೆಗೆ ಮ್ಯಾರಥಾನ್ ಸ್ಪರ್ಧೆಯನ್ನು ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಿಂದ ಸಮ್ಮೇಳನ ನಡೆಯುವ ಸ್ಥಳ ದವರೆಗೆ ಹಮ್ಮಿಕೊಳ್ಳಲಾಗಿದೆ ಎಂದರು.

ಸ್ಪರ್ಧೆಯಲ್ಲಿ ಸುಮಾರು 35,000ದಿಂದ 40,000ದವರೆಗೂ ಜನರು ಭಾಗವಹಿಸಬೇಕು. ಕಾರ್ಯಕ್ರಮದ ಉದ್ಘಾಟನೆಗೆ ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದ ಸ್ವಾಮೀಜಿ ಆಗಮಿಸಲಿದ್ದು, ಅವರೊಡನೆ ವಿನಯ್ ಗುರೂಜಿ, ಚಿತ್ರನಟರಾದ ಡಾಲಿ ಧನಂಜಯ, ನಿನಾಸಂ ಸತೀಶ್, ಸಪ್ತಮಿ ಗೌಡ, ಭಾವನಾ ಆಗಮಿಸಲಿದ್ದಾರೆ ಎಂದರು. ಇದೇ ಸಂದರ್ಭ ಮ್ಯಾರಥಾನ್ ಟೀ ಶರ್ಟ್ ಬಿಡುಗಡೆ ಮಾಡಲಾಯಿತು.

Edited By : Vinayak Patil
PublicNext

PublicNext

15/12/2024 05:07 pm

Cinque Terre

16.78 K

Cinque Terre

0

ಸಂಬಂಧಿತ ಸುದ್ದಿ