ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಡ್ಯ: ಭ್ರಷ್ಟಾಚಾರದ ತನಿಖೆಗೆಗೆ ಬಂದವರು ಬಾಡೂಟ ಸವಿದರು - ಹಳ್ಳ ಹಿಡಿಯಿತಾ ತನಿಖೆ?

ಮಂಡ್ಯ: ಸರ್ಕಾರಿ ಅಧಿಕಾರಿಗಳು ಎಷ್ಟರ‌ಮಟ್ಟಿಗೆ‌ ಅಡ್ಡ ದಾರಿ ಹಿಡಿದಿದ್ದಾರೆ ಅಂದ್ರೆ ಭ್ರಷ್ಟಾಚಾರವೊಂದರ ತನಿಖೆಗೆ‌ ಬಂದ ಅಧಿಕಾರಿಗಳು ಆರೋಪ ಎದುರಿಸುತ್ತಿರುವವರ ಜೊತೆ ಕುಳಿತು ಬಾಡೂಟದ ಸವಿದ ಪ್ರಸಂಗ ಮಂಡ್ಯ ಜಿಲ್ಲೆ ನಾಗ‌ಮಂಗಲದಲ್ಲಿ ನಡೆದಿದೆ.

ನಾಗಮಂಗಲದಲ್ಲಿ ಈ ಹಿಂದೆ ಸರ್ಕಾರಿ‌ ಆಸ್ಪತ್ರೆಯಲ್ಲಿ ಹಗರಣವೊಂದು ನಡೆದಿದ್ದು ಅದಕ್ಕೆ ಸಂಬಂಧಿಸಿದಂತೆ‌ ನಾಗಣ್ಣಗೌಡ ಎಂಬುವವರು ಆರೋಪಿಸಿ, ಜಿಲ್ಲಾವೈದ್ಯಾಧಿಕಾರಿಗೆ ದೂರು ನೀಡಿದ್ದರು. ಪರಿಣಾಮ ಜಿಲ್ಲಾ ಆರೋಗ್ಯಾಧಿಕಾರಿ ತನಿಖೆಗೆ ಆದೇಶ ಮಾಡಿದ್ರು. ಅದೇಶದಂತೆ ಇಂದು ತನಿಖೆಗೆ ಬಂದ ಅಧಿಕಾರಿಗಳು ಹಗರಣ ನಡೆದ ಸಮಯದಲ್ಲಿ ಗುಮಾಸ್ತನಾಗಿ ಕೆಲಸ ನಿರ್ವಹಿಸುತ್ತಿದ್ದ ಮೋಹನ್ ಎಂಬುವವನೊಂದಿಗೆ ಕುಳಿತು ಕೆಲಸದ ಸಮಯದಲ್ಲಿ ಬಾಡೂಟ ಸವಿದು ಮೂರು ದಿನದ ತನಿಖೆಯನ್ನ ಒಂದೇ ದಿನದಲ್ಲಿ‌ ಮುಗಿಸಿ ಹೊರಟಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

Edited By : Shivu K
PublicNext

PublicNext

06/12/2024 10:23 am

Cinque Terre

26.56 K

Cinque Terre

0