ಮಂಡ್ಯ: ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಬಳಘಟ್ಟ ಗ್ರಾಮದ ಬಳಿ ದರೋಡೆ ಮಾಡಿ ಎಸ್ಕೇಪ್ ಆಗುತ್ತಿದ್ದ ಇಬ್ಬರನ್ನು ಗ್ರಾಮಸ್ಥರು ಕಂಬಕ್ಕೆ ಕಟ್ಟಿ ಥಳಿಸಲಾಗಿದೆ.
ಬೆಳಗಾವಿ ಮೂಲದ ಚಿನ್ನದ ವ್ಯಾಪಾರಿಗಳಾ ಬಾಲಾಜಿ, ಸಿರಾಜ್ ಚಿನ್ನ ಮಾರಿದ ಹಣದೊಂದಿಗೆ ಮೈಸೂರಿಗೆ ಬರುತ್ತಿದ್ದರು. ಈ ವೇಳೆ ಶ್ರೀರಂಗಪಟ್ಟಣ-ಜೇವರ್ಗಿ ಹೆದ್ದಾರಿಯಲ್ಲಿ ಚಿನ್ನದ ವ್ಯಾಪಾರಿಗಳಿದ್ದ ಕಾರನ್ನು 12 ಮಂದಿ ತಂಡ ಹಿಂಬಾಲಿಸಿಕೊಂಡು ಬಂದು ದರೋಡೆಗೆ ಯತ್ನಿಸಿದ್ದರು. ಈ ವೇಳೆ ಕಿರುಚಾಟ ಕೇಳಿಸಿಕೊಂಡು ಗ್ರಾಮಸ್ಥರು ನೆರವಿಗೆ ಬಂದರು. ಬಂಧಿತ ಕಳ್ಳರು ಕೇರಳ ಮೂಲದವರೆಂದು ತಿಳಿದು ಬಂದಿದೆ. ಪಾಂಡವಪುರ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ.
PublicNext
15/09/2022 04:57 pm