ಗದಗ: ಗಣೇಶ ಹಬ್ಬದ ಹಿನ್ನೆಲೆ ಲಕ್ಷ್ಮೇಶ್ವರ ಠಾಣೆಯ ಪೋಲಿಸರು ಗದಗ ಜಿಲ್ಲೆ ಪೋಲಿಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಹಾಗೂ ಶಿರಹಟ್ಟಿ ವೃತ್ತದ ಸಿಪಿಐ ವಿಕಾಸ್ ಲಮಾಣಿ ನೇತೃತ್ವದಲ್ಲಿ ರೂಟ್ ಮಾರ್ಚ್ ನಡೆಸಲಾಯಿತು.
ನಂತರ ಪಬ್ಲಿಕ್ ನೆಕ್ಸ್ಟ ಜೊತೆ ಮಾತನಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜ್ ಗಣೇಶ ಹಬ್ಬದ ಪ್ರಯುಕ್ತ ಕಡ್ಡಾಯವಾಗಿ ಪರವಾನಿಗೆ ಪಡೆಯಬೇಕು. ಉತ್ಸವ ಸಮಿತಿಗಳು ಸುರಕ್ಷತೆಯ ಜವಾಬ್ದಾರಿ ಹೊರಬೇಕು. ಜೊತೆಗೆ ಕೋಮು ಸೌಹಾರ್ದತೆ ಹಾಳಾಗದಂತೆ ಉತ್ಸವ ನಡೆಯಬೇಕು. ಮೂರ್ತಿ ಪ್ರತಿಷ್ಟಾಪನೆಯಾದಾಗ ಪ್ರತಿ ಪೆಂಡಾಲ್‌ಗೆ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗುತ್ತೆ. ಪೆಂಡಾಲ್‌ನಲ್ಲಿ ಸಿಸಿ ಟಿವಿ ಅಳವಡಿಸಲಾಗುತ್ತೆ. ಡ್ರೋನ್ ಮೂಲಕವೂ ಸೂಕ್ಷ್ಮ ಪ್ರದೇಶದ ಮೇಲೆ ಕಣ್ಣಿಡಲಾಗುತ್ತದೆ. ವಾಟ್ಸಾಪ್ ಫೇಸ್ ಬುಕ್‌ನಲ್ಲಿ ಶಾಂತಿ ವಾತಾವರಣ ಕೆಡಿಸುವ ಕಿಡಿಗೇಡಿಗಳ ಮೇಲೆ ಕಣ್ಣಿರಿಸಲಾಗಿದೆ. ಶಾಂತಿಯಿಂದ ಉತ್ಸವ ನಡೆಸಲು ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.
PublicNext
30/08/2022 08:50 pm