ಬೆಂಗಳೂರು: ಮಾನಸಿಕ ವಿಕಲಚೇತನ ಇಬ್ಬರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಳು ಆ ತಾಯಿ. ಆದರೆ, ಆಕೆಯ ತಪ್ಪಿ ಇದರಲ್ಲಿ ಏನ್ ಇದೆ. ಆದರೂ, ಆ ತಾಯಿಯನ್ನ ಅತ್ತೆ,ನಾದಿನಿ ಮತ್ತು ಗಂಡ ಕಿರುಕುಳ ನೀಡಿ ಸಾವಿಗೆ ಕಾರಣರಾಗಿದ್ದಾರೆ. ಈ ಕಾರಣಕ್ಕೇನೆ ಬೆಂಗಳೂರು ಹೈಕೋರ್ಟ್ ಇವರಿಗೆ ಜೈಲು ಶಿಕ್ಷೆ ನೀಡಿದೆ.
ಹೇಮಲತಾ ಮತ್ತು ಮಾದೇಶ್ ಮದುವೆ ಆಗಿದ್ದರು. ಇವರಿಗೆ ಇಬ್ಬರು ಹೆಣ್ಣುಮಕ್ಕಳು ಜನಿಸಿದ್ದರು. ಆದರೆ, ಇಬ್ಬರೂ ಮಾನಸಿಕ ವಿಕಲಚೇತನರೇ ಆಗಿದ್ದರು. ಇದರಿಂದ ತಾಯಿ ಹೇಮಲತಾಗೆ ಪತಿ,ಅತ್ತೆ ಹಾಗೂ ನಾದಿನಿ ಕಿರುಕುಳ ನೀಡ್ತಾನೇ ಇದ್ದರು.
ಅದನ್ನ ಸಹಿಸಿಕೊಂಡೇ ಬಂದ ಹೇಮಲತಾಳನ್ನ ಅತ್ತೆ ಮಾದಮ್ಮ ಸೀಮೆ ಎಣ್ಣೆ ಹಾಕಿದ್ದರು. ನಾದಿನಿ ಮಹದೇವಮ್ಮ ಬೆಂಕಿ ಹಚ್ಚಿದ್ದರು. ಶೇಕಡ 85 ರಷ್ಟು ಸುಟ್ಟು ಹೋಗಿದ್ದ ಹೇಮಲತಾ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರು. 2012 ರಲ್ಲಿ ನಡೆದ ಈ ಘಟನೆಗೆ ಈಗ ನ್ಯಾಯ ಸಿಕ್ಕಿದೆ. ಅಪರಾಧಿಗಳಿಗೆ ತಕ್ಕ ಶಾಸ್ತಿ ಆಗಿದೆ.
PublicNext
27/04/2022 04:33 pm