ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಪೇಜಾವರ ಶ್ರೀಗಳ ವಿರುದ್ಧ ಇದೆಂಥಾ ಕೆಟ್ಟ ಭಾಷೆ? ಭೀಮ್ ಆರ್ಮಿ ಮುಖಂಡನ ಅವಾಚ್ಯ ವಿಡಿಯೋ ಪಬ್ಲಿಕ್ ನೆಕ್ಸ್ಟ್ ಗೆ ಲಭ್ಯ !

ಉಡುಪಿ: ಉಡುಪಿಯ ಪೇಜಾವರ ಶ್ರೀಗಳಿಗೆ ಭೀಮ್ ಆರ್ಮಿ ಮುಖಂಡನೊಬ್ಬ ಅವಾಚ್ಯವಾಗಿ ನಿಂದಿಸಿ, ಜೀವ ಬೆದರಿಕೆಯೊಡ್ಡಿದ್ದಾನೆ. ಈ ಕುರಿತ ವಿಡಿಯೋ ಪಬ್ಲಿಕ್ ನೆಕ್ಸ್ಟ್ ಗೆ ಲಭ್ಯವಾಗಿದೆ.

ಇತ್ತೀಚೆಗೆ ಶ್ರೀಗಳು ಸಂವಿಧಾನ ಬದಲಾವಣೆ ಕುರಿತು ಮಾತನಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಖುದ್ದು ಶ್ರೀಗಳೇ ಈ ಆರೋಪವನ್ನು ಅಲ್ಲಗಳೆದಿದ್ದರು. ಇದಾಗಿ ತಿಂಗಳು ಕಳೆದಿದೆ. ಇಷ್ಟಾದರೂ , ಭೀಮ್ ಆರ್ಮಿ ಸಂಘಟನೆಯ ಮತಿನ್ ಕುಮಾರ್ ಬಿಜಾಪುರ ಎಂಬಾತ ಶ್ರೀಗಳ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾನೆ....

ಇಲ್ಲಿ ಬರೆಯಲೂ ಆಗದ ಪದವನ್ನು ಆರೋಪಿ ಬಳಸಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಪೇಜಾವರ ಶ್ರೀಗಳನ್ನು ಏಕವಚನದಲ್ಲಿ ಅವಾಚ್ಯವಾಗಿ ನಿಂದಿಸಿ ಹಿಂದೂ ಧರ್ಮದ ನಿಂದನೆ ಮಾಡಿದ್ದನ್ನು ಹಿಂದೂ ಜಾಗರಣ ವೇದಿಕೆ‌ ಖಂಡಿಸಿದ್ದು ಉಡುಪಿ ನಗರದಲ್ಲಿ ದೂರು ದಾಖಲಿಸಿದೆ‌. ಭಾರತೀಯ ನ್ಯಾಯ ಸಂಹಿತೆ BNS 2023 U/s-362,351(2),353(2),296 ಅನ್ವಯ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ.

Edited By : Nagesh Gaonkar
PublicNext

PublicNext

14/12/2024 02:01 pm

Cinque Terre

22.88 K

Cinque Terre

22

ಸಂಬಂಧಿತ ಸುದ್ದಿ