ಲಕ್ನೋ: ಧಾರ್ಮಿಕ ಸ್ಥಳಗಳಲ್ಲಿ ಅಕ್ರಮವಾಗಿ ಅಳವಡಿಸಿರುವ ಧ್ವನಿವರ್ಧಕಗಳನ್ನು ತೆಗೆದುಹಾಕುವಂತೆ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರವು ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ಮಸೀದಿ, ದೇವಸ್ಥಾನಗಳಲ್ಲಿ ಅಳವಡಿಸಿದ ಧ್ವನಿವರ್ಧಕಗಳನ್ನು ತೆರವು ಹಾಕುತ್ತಿದ್ದಾರೆ.
ಏಪ್ರಿಲ್ 30ರೊಳಗೆ ಅಕ್ರಮವಾಗಿ ಧ್ವನಿವರ್ಧಕಗಳನ್ನು ಅಳವಡಿಸಲಾಗಿರುವಂತಹ ಎಲ್ಲಾ ಸ್ಥಳಗಳ ಪಟ್ಟಿಯನ್ನು ಮಾಡಿ ಯುಪಿ ಗೃಹ ಇಲಾಖೆಗೆ ವರದಿಯನ್ನು ಕಳುಹಿಸುವಂತೆ ಪೊಲೀಸ್ ಠಾಣೆಗಳಿಗೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಕೈಗೊಂಡ ಪೊಲೀಸರು ಮಸೀದಿ, ದೇವಸ್ಥಾನಗಳ ಮೇಲಿನ ಮೈಕಲ್ ತೆರವುಗೊಳಿಸುತ್ತಿದ್ದಾರೆ.
PublicNext
27/04/2022 12:47 pm