ರಾಯಪುರ:ಪೋಷಕರಿಂದ ಮಗಳು ತನ್ನ ಮದುವೆಯ ವೆಚ್ಚವನ್ನ ಪಡೆಯಬಹುದು ಎಂದು ರಾಯಪುರ ಹೈಕೋರ್ಟ್ ಈಗ ಮಹತ್ವದ ತೀರ್ಪು ನೀಡಿದೆ.
ಹಿಂದೂ ದತ್ತು ಸ್ವೀಕರ ಮತ್ತು ಜೀವನಾಂಶ ಕಾಯ್ದೆ ಅಡಿಯಲ್ಲಿಯೇ ಅವಿವಾಹಿತ ಮಗಳು ತನ್ನ ಪೋಷಕರಿಂದಲೇ ಮದುವೆ ಖರ್ಚನ್ನ ಪಡೆಯಲು ಅವಕಾಶ ಇಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.
ಈ ಹಿನ್ನೆಲೆಯಲ್ಲಿಯೇ ಛತೀಸಗಡ್ ದುರ್ಗ ಜಿಲ್ಲೆಯ 35 ವರ್ಷದ ರಾಜೇಶ್ವರಿ ಅರ್ಜಿ ಸಲ್ಲಿಸಿದ್ದರು.ಭಿಪಾಸ್‌ಪುರ ವಿಭಾಗೀಯ ಪೀಠ ಈ ಅರ್ಜಿ ವಿಚಾರಣೆ ನಡೆಸಿತ್ತು. ನ್ಯಾಯಮೂರ್ತಿಗಳಾದ ಗೌತಮ್ ಭದೂರಿ ಮತ್ತು ಸಂಜಯ್ ಎಸ್.ಅಗರವಾಲ್, ಹಿಂದೂ ದತ್ತು ಸ್ವೀಕರ ಮತ್ತು ಜೀವನಾಂಶ ಕಾಯ್ದೆ ಅಡಿ ಪೋಷಕರಿಂದ ಮದುವೆ ವೆಚ್ಚ ಪಡೆಯಲು ಅವಕಾಶ ಇದೆ ಎಂದು ಹೇಳಿದ್ದಾರೆ.
PublicNext
01/04/2022 11:06 am