ಬೆಂಗಳೂರು: ರಾಜ್ಯ ಹೈಕೋರ್ಟ್ ಇಂದು ಹಿಜಾಬ್ ವಿವಾದಕ್ಕೆ ತೆರೆ ಎಳೆದಿದೆ. ಆದರೆ, ಇದನ್ನ ಪ್ರಶ್ನಿಸಿ ಈಗಾಗಲೇ ಸುಪ್ರಿಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ.
ಹಿಜಾಬ್ ಇಸ್ಲಾಂ ಧರ್ಮದ ಅಗತ್ಯ ಧಾರ್ಮಿಕ ಆಚರಣೆ ಅಲ್ಲವೇ ಅಲ್ಲ ಅಂತಲೇ ಹೈಕೋರ್ಟ್ ತೀರ್ಪು ನೀಡಿದೆ. ಇದನ್ನ ಪ್ರಶ್ನಿಸಿಯೇ ವಿದ್ಯಾರ್ಥಿನಿ ನಿಭಾ ನಾಜ್ ಪರ ವಕೀಲ ಅನಾಸ್ ತನ್ವೀರ್ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದಾರೆ.
ಹಿಜಾಬ್ ಧರಿಸುವುದ ಅಭಿವ್ಯಕ್ತಿ ವ್ಯಾಪ್ತಿಗೆ ಬರುತ್ತದೆ. ಸಂವಿಧಾನದ ಅನುಚ್ಛೇದ 19 (1) (ಎ) ಅಡಿಯಲ್ಲಿ ರಕ್ಷಿಸಲ್ಪಟ್ಟಿದೆ. ಆದರೆ ಹೈಕೋರ್ಟ್ ಇದನ್ನ ಗಮನಿಸುವಲ್ಲಿ ವಿಫಲವಾಗಿದೆ ಅಂತಲೇ ಮೇಲ್ಮನವಿಯಲ್ಲಿ ಹೇಳಲಾಗಿದೆ.
PublicNext
15/03/2022 09:53 pm