ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯ ಅಪರಾಧಿಗಳಲ್ಲಿ ಒಬ್ಬನಾದ ಎಜಿ ಪೇರರಿವಾಲನ್‌ಗೆ ಸುಪ್ರೀಂ ಕೋರ್ಟ್ ಬುಧವಾರ ಜಾಮೀನು ಮಂಜೂರು ಮಾಡಿದೆ.
ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಎಜಿ ಪೆರಾರಿವಾಲನ್ 32 ವರ್ಷ ಜೈಲಿನಲ್ಲಿ ಕಳೆದಿದ್ದಾನೆ. ಜೈಲಿನಲ್ಲಿ ಪೆರಾರಿವಾಲನ್ ನಡವಳಿಕೆ, ಆರೋಗ್ಯ ಮತ್ತು 30 ವರ್ಷಗಳಿಗಿಂತ ಹೆಚ್ಚು ಜೈಲಿನಲ್ಲಿ ಕಳೆದಿದ್ದಾರೆ ಎಂದು ನ್ಯಾಯಾಲಯವು ಗಣನೆಗೆ ತೆಗೆದುಕೊಂಡಿದೆ.
ಜೈಲಿನಿಂದ ಬಿಡುಗಡೆ ಕೋರಿ ಸಲ್ಲಿಸಿರುವ ಮನವಿಯ ಕುರಿತು ರಾಜ್ಯಪಾಲರು ಇನ್ನೂ ತೀರ್ಮಾನಿಸದಿರುವ ಕಾರಣ ಪೇರರಿವಾಲನ್‌ಗೆ ಜಾಮೀನು ನೀಡಬೇಕೆ ಎಂದು ಸುಪ್ರೀಂಕೋರ್ಟ್ ಚಿಂತನೆ ನಡೆಸಿತ್ತು. ಪೇರರಿವಾಲನ್ ಮನವಿಯನ್ನು ನಿರ್ಧರಿಸಲು ರಾಷ್ಟ್ರಪತಿಗಳೇ ಸೂಕ್ತ ಅಧಿಕಾರ ಎಂದು ಕೇಂದ್ರವು ಮನವಿಯನ್ನು ವಿರೋಧಿಸಿತ್ತು. ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಪೇರರಿವಾಲನ್ ಬಂಧನಕ್ಕೊಳಗಾದಾಗ ಆತನ ವಯಸ್ಸು 19. ಮೇ 1999ರಲ್ಲಿಯೇ ಪೇರರಿವಾಲನ್‌ಗೆ ಮರಣದಂಡನೆ ವಿಧಿಸಲಾಗಿತ್ತು.
PublicNext
09/03/2022 05:26 pm