ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಾದಗಿರಿಯಲ್ಲಿ ಮಟಕಾ ಬುಕ್ಕಿಗಳ ಪರೇಡ್, ಖಡಕ್ ವಾರ್ನಿಂಗ್ ನೀಡಿದ ಎಸ್ಪಿ..!

ಯಾದಗಿರಿ: ಇಂದು ಜಿಲ್ಲಾ ಪೊಲೀಸ್ ಕಚೇರಿಯ ಮುಂದೆ ಯಾದಗಿರಿ ಮತ್ತು ಗುರುಮಿಟ್ಕಲ್ ತಾಲೂಕಿನ ಮಟಕಾ, ಜೂಜಾಟ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮಟಕಾ ಬುಕ್ಕಿಗಳಿಗೆ ಯಾದಗಿರಿ ಎಸ್ಪಿ ಡಾ. ಸಿಬಿ ವೇದಮೂರ್ತಿ ಅವರು ಪರೆಡ್ ಕೈಕೊಂಡರು.

ಸಾರ್ವಜನಿಕರು ಮತ್ತು ಕೂಲಿ ಕಾರ್ಮಿಕರು ಮಟಕಾ ಜೂಜಾಟದಿಂದ ಆರ್ಥಿಕವಾಗಿ ತೊಂದರೆ ಅನುಭವಿಸುತ್ತಿದ್ದಾರೆ. ನಿಮಗೆ ಜೀವನ ಮಾಡಲು ಬೇರೆ ದಾರಿ ಇಲ್ವಾ.? ಇದೆ ಲಾಸ್ಟ್ ವಾರ್ನಿಂಗ್ ಇನ್ಮುಂದೆ ಇಂಥ ಪ್ರಕರಣದಲ್ಲಿ ಸಿಕ್ಕರೆ ಜೈಲಿಗೆ ಕಲಿಸಬೇಕಾಗುತ್ತೆ ಅಂತಾ ಖಡಕ್ ಆಗಿ ವಾರ್ನ್ ಕೊಟ್ಟರು.

ಅಲ್ಲದೆ ಮಟಕಾ ಬುಕ್ಕಿಗಳಿಗೆ ಇನ್ನು ಮುಂದೆ ಜಿಲ್ಲೆಯಲ್ಲಿ ಮಟಕಾ ಜೂಜಾಟದಲ್ಲಿ ತೊಡಗಿದಲ್ಲಿ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಮತ್ತು ಜಿಲ್ಲೆಯಿಂದ ಗಡಿಪಾರು ಮಾಡಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಯಾದಗಿರಿ ಡಿವೈಎಸ್ಪಿ, ಗುರುಮೆಟ್ಕಲ್, ಸೈದಾಪುರ್ ಸಿಪಿಐ ಹಾಗೂ ವಡಗೇರಾ ಪಿಎಸ್ಐ ಮತ್ತು ಸಿಬ್ಬಂದಿ ಇದ್ದರು.

ವರದಿ: ಮೌನೇಶ ಬಿ. ಮಂಗಿಹಾಳ, ಪಬ್ಲಿಕ್ ನೆಕ್ಸ್ಟ್ ಯಾದಗಿರಿ

Edited By : Nagesh Gaonkar
PublicNext

PublicNext

04/02/2022 06:17 pm

Cinque Terre

52.96 K

Cinque Terre

0

ಸಂಬಂಧಿತ ಸುದ್ದಿ