ನವದೆಹಲಿ: ಪೂರ್ವ ದೆಹಲಿಯ ಘಾಜಿಪುರದಲ್ಲಿರುವ ಹೂವಿನ ಮಾರುಕಟ್ಟೆಯಲ್ಲಿ ಸುಧಾರಿತ ಸ್ಫೋಟಕಗಳು ಪತ್ತೆಯಾಗಿ ಸಾಕಷ್ಟು ಆತಂಕ ಸೃಷ್ಟಿಸಿದ್ದು, ಪೊಲೀಸರ ತಂಡವು ಯಶಸ್ವಿಯಾಗಿ ಅದನ್ನು ನಿಷ್ಕ್ರಿಯಗೊಳಿಸಿದೆ.
ಅನುಮಾನಾಸ್ಪದ ಚೀಲವೊಂದು ಹೂವಿನ ಮಾರುಕಟ್ಟೆಯಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣವೇ ಪೊಲೀಸರೊಂದಿಗೆ ಸ್ಥಳಕ್ಕಾಗಮಿಸಿದ ಎನ್ಎಸ್ಜಿ ತಂಡ ಸ್ಫೋಟಕವಿದ್ದ ಬ್ಯಾಗ್ನ್ನು ವಶಪಡಿಸಿಕೊಂಡು ಬಾಂಬ್ನ್ನು ನಗರದ ಹೊರವಲಯದಲ್ಲಿ ನಿಷ್ಕ್ರಿಯಗೊಳಿಸಿದ್ದಾರೆ. ಇನ್ನು ಸ್ಥಳದಲ್ಲಿ ಬಾಂಬ್ ಇಟ್ಟ ಆರೋಪಿಗಳಿಗಾಗಿ ಪೊಲೀರು ಶೋಧ ಮುಂದುವರೆಸಿದ್ದಾರೆ.
PublicNext
14/01/2022 04:33 pm