ಬೆಂಗಳೂರು: ಇಲ್ಲಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಪ್ರತಿ ಬಾರಿ ಒಂದಿಲ್ಲೊಂದು ರೀತಿಯಲ್ಲಿ ಸುದ್ದಿಯಲ್ಲಿರುತ್ತೆ. ಕೈದಿಗಳಿಗೆ ಐಶಾರಾಮಿ ಸೌಲಭ್ಯ , ಮೊಬೈಲ್ ಬಳಕೆ, ಗಾಂಜಾ ಸಹಿತ ಹಲವು ರೀತಿ ಚಟುವಟಿಕೆ ನಡೆಯುತ್ತಿರುವ ವಿಚಾರ ಎಲ್ಲರಿಗೂ ತಿಳಿದೇ ಇದೆ.
ಇದೀಗ ಮತ್ತೆ ಇಂದು ಬೆಳ್ಳಂಬೆಳಗ್ಗೆ ಸಿಸಿಬಿ ಅಧಿಕಾರಿಗಳು ಕೇಂದ್ರ ಕಾರಾಗೃಹಕ್ಕೆ ದಾಳಿ ನಡೆಸಿದ್ದಾರೆ. ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಇಬ್ಬರು ಡಿಸಿಪಿ, 15 ಮಂದಿ ಇನ್ಸ್ ಪೆಕ್ಟರ್ ಗಳ ತಂಡ ಕಾರಾಗೃಹದಲ್ಲಿ ಹುಡುಕಾಟ ನಡೆಸಿದ್ದಾರೆ.
ಜೈಲಿನಲ್ಲಿದ್ದುಕೊಂಡೇ ಹೊರಗಿನ ಕ್ರಿಮಿನಲ್ ಚಟುವಟಿಕೆಗಳಲ್ಲಿ ಕೈದಿಗಳು ತೊಡಗಿದ್ದಾರೆ ಎಂಬ ಆರೋಪಗಳ ಹಿನ್ನೆಲೆ ಇಂದು ಬೆಳಗ್ಗೆ ಆರು ಗಂಟೆಗೆ ಸಿಸಿಬಿ ದಾಳಿ ನಡೆದಿದ್ದು, ಜೈಲಿನ ಅಧಿಕಾರಿಗಳು ಸಹ ಸಿಸಿಬಿ ಅಧಿಕಾರಿಗಳಿಗೆ ಸಹಕಾರ ನೀಡಿದ್ದಾರೆ.
ಇದೇ ವೇಳೆ ಜೈಲಿನಲ್ಲಿ ಗಾಂಜಾ ಪ್ಯಾಕೆಟ್ , ಗಾಂಜಾ ಸೇದುವ ಪೈಪ್ ಗಳು ದೊರೆತಿದ್ದು ಇನ್ನಷ್ಟು ನಿಷೇಧಿತ ವಸ್ತುಗಳಿಗಾಗಿ ಹುಡುಕಾಟ ನಡೆದಿದೆ.
ಪ್ರತಿಬಾರಿ ಸಿಸಿಬಿ ದಾಳಿ ನಡೆದಾಗಲೂ ಮಾರಕಾಸ್ತ್ರ, ಡ್ರಗ್ಸ್ ದೊರೆಯುತ್ತಲೇ ಇದ್ದು, ಜೈಲಿನ ಅಧಿಕಾರಿಗಳ ನಿರ್ಲಕ್ಷ್ಯ ಜೊತೆಗೆ ಸಿಬ್ಬಂದಿ ಬೇಜವಾಬ್ದಾರಿತನ ಎದ್ದು ಕಾಣುತ್ತದೆ.
PublicNext
30/11/2021 08:46 pm