ರಾಯಚೂರು: ಇಡೀ ರಾಜ್ಯದಲ್ಲಿ ನಕ್ಸಲ್ ಎಂಬ ಪದ ಹುಟ್ಟಿದ್ದೇ ರಾಯಚೂರಿನಲ್ಲಿ. ಒಂದು ಕಾಲದಲ್ಲಿ ರಾಜ್ಯದಲ್ಲಿ ನಕ್ಸಲಿಸಂ ಹುಟ್ಟೂರು ಅಂತಾನೇ ರಾಯಚೂರು ಜಿಲ್ಲೆಯನ್ನು ಕರೆಯಲಾಗುತ್ತಿತ್ತು. ದಶಕಗಳ ಬಳಿಕ ಇದೀಗ ರಾಯಚೂರಿನಲ್ಲಿ ನಕ್ಸಲ್ ಪದ ಮತ್ತೆ ಮರುಕಳಿಸಿದೆ.
ರಾಯಚೂರು ಎಸ್.ಪಿ ಸೀಕ್ರೆಟ್ ಆಗಿಯೇ ನಕ್ಸಲರನ್ನ ಮಟ್ಟ ಹಾಕಲು ರಣತಂತ್ರ ರೂಪಿಸುತ್ತಿದ್ದಾರೆ ಎನ್ನಲಾಗಿದೆ. ಕೆಲ ದಿನಗಳ ಹಿಂದೆ ರಾಷ್ಟ್ರೀಯ ತನಿಖಾ ಸಂಸ್ಥೆ ಎನ್ಐಎ ಇಬ್ಬರು ನಕ್ಸಲರಿಗಾಗಿ ತಲಾ 10 ಲಕ್ಷ ರೂ. ಘೋಷಿಸಿದೆ. ಅಷ್ಟೇ ಅಲ್ಲದೆ ಮಾವೋವಾದಿ ಪ್ರಕರಣದಲ್ಲಿ ಇಬ್ಬರ ಬಂಧನಕ್ಕೆ ವಾರೆಂಟ್ ಹೊರಡಿಸಲಾಗಿದೆ.
ರಾಯಚೂರಿನ ಕುರುಡಿ ಗ್ರಾಮದ ಜಯಣ್ಣ ಅಲಿಯಾಸ್ ಮಹೇಶ್, ಹಾಗೂ ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನ ಗೀತಾ ಅಲಿಯಾಸ್ ಸುಂದರಿಗೆ ವಾರೆಂಟ್ ಹೊರಡಿಸಲಾಗಿದೆ. ಸದ್ಯ ಈ ಇಬ್ಬರು ಶಂಕಿತ ನಕ್ಸಲರಿಗಾಗಿ ರಾಜ್ಯದಲ್ಲಿ ತೀವ್ರ ತಲಾಶ್ ನಡೆಸಲಾಗುತ್ತಿದೆ. ಇದೀಗ ನಕ್ಸಲ್ ನಿಗ್ರಹದಳ ಮುಖ್ಯಸ್ಥರಾಗಿದ್ದ ನಿಖಿಲ್ ಸದ್ಯ ರಾಯಚೂರು ಜಿಲ್ಲೆಗೆ ಹಠಾತ್ ವರ್ಗಾವಣೆಯಾಗಿ ಬಂದಿದ್ದಾರೆ. ಹೀಗೆ ಇವರು ದಿಢೀರ್ ರಾಯಚೂರಿಗೆ ವರ್ಗಾವಣೆಯಾಗಿರೋದು ನಕ್ಸಲರ ನಿಗ್ರಹಕ್ಕಾಗೇ ಇರಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.
PublicNext
22/11/2021 08:22 am