ವರದಿ: ಮೌನೇಶ ಬಿ. ಮಂಗಿಹಾಳ, ಪಬ್ಲಿಕ್ ನೆಕ್ಸ್ಟ್ ಯಾದಗಿರಿ
ಯಾದಗಿರಿ: ಇನ್ಮುಂದೆ ಉತ್ತಮ ಜೀವನ ನಡೆಸಿ ಒಳ್ಳೆಯವರಾಗಬೇಕು.. ಅದು ಬಿಟ್ಟು ಹೊರಗಡೆ ಹೋಗಿ ಬಾಲ ಬಿಚ್ಚಿದ್ರೆ ಹುಷಾರ್... ಹೀಗಂತಾ ಪುಡಿ ರೌಡಿಗಳಿಗೆ ಯಾದಗಿರಿ ಎಸ್ಪಿ ಡಾ. ಸಿಬಿ ವೇದಮೂರ್ತಿ ಅವರು, ಖಡಕ್ ಆಗಿ ವಾರ್ನ್ ಮಾಡಿದರು.
ಯಾದಗಿರಿಯ ಪೊಲೀಸ್ ಕಚೇರಿಯಲ್ಲಿ ಇಂದು ರೌಡಿ ಪೆರೇಡ್ ಹಮ್ಮಿಕೊಂಡಿದ್ದು, ಯಾದಗಿರಿ ನಗರ ಠಾಣೆಯ 20 ರೌಡಿಗಳು, ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯ 37, ವಡಗೇರಾ ಠಾಣೆಯ 26, ಗುರುಮಿಟಕಲ್ ಠಾಣೆಯ 49 ಮತ್ತು ಶಹಪೂರ ಪೊಲೀಸ್ ಠಾಣಾ ವ್ಯಾಪ್ತಿಯ 55 ಹೀಗೆ ಒಟ್ಟು 187 ಜನ ರೌಡಿ ಆಸಾಮಿಗಳಿಗೆ ಪೆರೇಡ್ ನಡೆಸಿದ ಎಸ್ಪಿ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗದೇ ಸದ್ವರ್ತನೆಯಿಂದ ಇರುವಂತೆ ಎಚ್ಚರಿಕೆ ನೀಡಿದರು.
ಅಲ್ಲದೇ...ಅವರ ಸದ್ವರ್ತನೆಗಾಗಿ ಬಾಂಡ್(ಮುಚ್ಚಳಿಕೆ ಪತ್ರ) ಪಡೆಯಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಯಿತು. ಇದಲ್ಲದೇ ರೌಡಿಗಳು ಗಲಾಟೆ, ಗೂಂಡಾಗಿರಿ, ಮಕ್ಕಳ ಮೇಲೆ ದೌರ್ಜನ್ಯದಂತಹ ಕೃತ್ಯವೆಸಗಿದರೆ ಇದಕ್ಕಿಂತಲೂ ಹೆಚ್ಚಿನ ಶಿಕ್ಷೆ ನೀಡಲಾಗುತ್ತದೆ ಅಂತಾ ಹೇಳಿದರು.
ಈ ಪರೇಡ್ ನಲ್ಲಿ ಡಿವೈಎಸ್ಪಿ, ಯಾದಗಿರಿ ಹಾಗೂ ಯಾದಗಿರಿ ಉಪವಿಭಾಗದ ಪಿ.ಐ ಮತ್ತು ಸಿ.ಪಿಐ ಹಾಗೂ ಪಿಎಸ್ಐ ರವರು ಹಾಜರಿದ್ದರು.
PublicNext
08/11/2021 05:56 pm