ಶ್ರೀನಗರ: ಜಮ್ಮು-ಕಾಶ್ಮೀರದ ಆವಂತಿಪೋರಾ ಜಿಲ್ಲೆಯ ತ್ರಾಲ್ ಪ್ರದೇಶದ ತಿಲ್ವಾನಿ ಮೊಹಲ್ಲಾದಲ್ಲಿ ಭದ್ರತಾ ಪಡೆ ಮತ್ತು ಉಗ್ರರ ನಡುವೆ ಭಾರೀ ಗುಂಡಿನ ಕಾಳಗ ನಡೆದಿದ್ದು, ಈ ಸಂದರ್ಭದಲ್ಲಿ ಜೈಶ್ ಎ ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಉನ್ನತ ಕಮಾಂಡರ್ ಎಂಬಾತನನ್ನ ಎನ್ಕೌಂಟರ್ ಮೂಲಕ ಹೊಡೆದುಹಾಕಿದ್ದಾರೆ.
ಎನ್ಕೌಂಟರ್ಗೆ ಬಲಿಯಾದ ಉಗ್ರ ಶಮ್ಸುದ್ದೀನ್ ಈ ಮೊದಲು ಮರಗಳ್ಳನಾಗಿದ್ದ. ನಂತರ ಜೈಶ್ ಎ ಸಂಘಟನೆಯ ಓವರ್ ಗ್ರೌಂಡ್ ವರ್ಕರ್ ಆಗಿದ್ದ. ನಂತರ 2019ರಲ್ಲಿ ಅಧಿಕೃತವಾಗಿ ಸಂಘಟನೆ ಸೇರಿಕೊಂಡಿದ್ದ ಎನ್ನಲಾಗಿದೆ. ಪೊಲೀಸರ ಪ್ರಕಾರ ಈತ ಪುಲ್ವಾಮಾ ಜಿಲ್ಲೆಯ ಸತುರಾ ಟ್ರಾಲ್ನ ನಿವಾಸಿ ಎನ್ನಲಾಗಿದೆ.
ತ್ರಾಲ್ ಪ್ರದೇಶದಲ್ಲಿ ಉಗ್ರರು ಅಡಗಿದ್ದಾರೆಂಬ ಮಾಹಿತಿ ಮೇರೆಗೆ ಸಿಆರ್ ಪಿಎಫ್ ಮತ್ತು ಪೊಲೀಸರು ಜಂಟಿಯಾಗಿ ಕೂಂಬಿಂಗ್ ಕಾರ್ಯಾಚರಣೆ ನಡೆಸಿದ್ದರು. ಈ ಸಂದರ್ಭದಲ್ಲಿ ಅಡಗಿಕೊಂಡಿದ್ದ ಉಗ್ರರು ಗುಂಡಿನ ದಾಳಿ ನಡೆಸಲು ಆರಂಭಿಸಿದಾಗ ಭದ್ರತಾ ಪಡೆ ಪ್ರತಿದಾಳಿ ನಡೆಸಲು ಆರಂಭಿಸಿತ್ತು ಎಂದು ವರದಿ ಹೇಳಿದೆ.
ಈ ಪ್ರದೇಶದಲ್ಲಿ ಶೋಧ ಕಾರ್ಯ ಮುಂದುವರಿದಿದ್ದು, ಕಳೆದ ಮೂರು ದಿನಗಳಲ್ಲಿ ಕೇಂದ್ರಾಡಳಿತ ಪ್ರದೇಶವಾದ ಜಮ್ಮು-ಕಾಶ್ಮೀರದಲ್ಲಿ ನಡೆದ 5ನೇ ಎನ್ ಕೌಂಟರ್ ಇದಾಗಿದ್ದು, ಏಳು ಮಂದಿ ಉಗ್ರರು ಸಾವನ್ನಪ್ಪಿದ್ದಾರೆ.
PublicNext
13/10/2021 08:18 pm