ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಿವೃತ್ತಿಗೆ 3ರೇ ದಿನ ಬಾಕಿ : ದೆಹಲಿ ಪೊಲೀಸ್ ಕಮಿಷನರ್ ಆಗಿ ಅಧಿಕಾರ ಸ್ವೀಕರಿಸಿದ ರಾಕೇಶ್ ಅಸ್ತಾನಾ

ನವದೆಹಲಿ: ಇದೇ 31ರಂದು ನಿವೃತ್ತರಾಗಲಿದ್ದ ಗುಜರಾತ್ ಕೇಡರ್ ನ ಹಿರಿಯ ಐಪಿಎಸ್ ಅಧಿಕಾರಿ ರಾಕೇಶ್ ಅಸ್ತಾನಾ ಅವರು ದೆಹಲಿ ಪೊಲೀಸ್ ಕಮಿಷನರ್ ಆಗಿ ಬುಧವಾವಾರ ಅಧಿಕಾರ ವಹಿಸಿಕೊಂಡರು. ನಿವೃತ್ತಿಗೆ ಕೆಲವೇ ದಿನಗಳು ಬಾಕಿ ಇರುವಾಗ ದೆಹಲಿ ಪೊಲೀಸ್ ಕಮಿಷನರ್ ಆಗಿ ನೇಮಿಸಿರುವುದರಿಂದ ಅವರ ಅಧಿಕಾರಾವಧಿ ಒಂದು ವರ್ಷ ಮುಂದುವರಿಯಲಿದೆ.

1984 ಬ್ಯಾಚ್ ನ ಅಧಿಕಾರಿಯಾಗಿರುವ ರಾಕೇಶ್ ಅವರು ಸಿಬಿಐನ ವಿಶೇಷ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಆಗ, ಸಿಬಿಐನ ನಿರ್ದೇಶಕರಾಗಿದ್ದ ಅಲೋಕ್ ವರ್ಮಾ ಅವರೊಂದಿಗಿನ ಜಟಾಪಟಿ ಚರ್ಚೆಗೆ ಗ್ರಾಸವಾಗಿತ್ತು.

Edited By : Nirmala Aralikatti
PublicNext

PublicNext

28/07/2021 05:58 pm

Cinque Terre

20.81 K

Cinque Terre

0

ಸಂಬಂಧಿತ ಸುದ್ದಿ